ಕನ್ನಡದ ವಿರಾಟ್ (Viraat), ನಲಿ ನಲಿಯುತ ಸಿನಿಮಾಗಳಲ್ಲಿ ನಟಿಸಿರುವ ವಿದಿಶಾ ಶ್ರೀವಾಸ್ತವ (Vidisha Srivastava) ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿದಿಶಾ ತಾಯಿಯಾಗುತ್ತಿರುವ ವಿಚಾರವನ್ನ ವಿದಿಶಾ ಸಹೋದರಿ ಶಾನ್ವಿ ಶ್ರೀವಾಸ್ತವ (Shanvi Srivastava) ಸೋಷಿಯಲ್ ಮೀಡಿಯಾದಲ್ಲಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.
2018ರಲ್ಲಿ ಸಾಯಕ್ ಎಂಬುವವರನ್ನು ನಟಿ ವಿದಿಶಾ ಬನಾರಸ್‌ನಲ್ಲಿ (Banaras) ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಕೆಲ ವರ್ಷಗಳ ಡೇಟಿಂಗ್ ನಂತರ ಹಿರಿಯರ ಸಮ್ಮತಿಯ ಮೇರೆಗೆ ದಾಂಪತ್ಯ ಜೀವನಕ್ಕೆ ಸಾಯಕ್ (Sayak)- ವಿದಿಶಾ (Vidhisha) ಕಾಲಿಟ್ಟಿದ್ದರು. ಇದನ್ನೂ ಓದಿ:‘ಪುಷ್ಪ’ ಟೀಮ್‌ಗೆ ED ಶಾಕ್ ಕೊಟ್ಟ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ನಿರ್ಮಾಪಕ
ನಟಿ ವಿದಿಶಾ ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ವಿದಿಶಾ ಸಹೋದರಿ ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾಸ್ತವ (Shanvi Srivastava) ಗುಡ್ ನ್ಯೂಸ್ ತಿಳಿಸಿದ್ದಾರೆ. ವಿದಿಶಾ ಜೊತೆಗಿನ ಫೋಟೋ ಹಂಚಿಕೊಂಡು ಶುಭಹಾರೈಸಿದ್ದಾರೆ. ಶಾನ್ವಿ ವಿಶ್ ಮಾಡ್ತಿದ್ದಂತೆ ಅಭಿಮಾನಿಗಳು ಕೂಡ ಶುಭಕೋರಿದ್ದಾರೆ.
ಶಾನ್ವಿ ಅವರು ಕನ್ನಡದ ಮಫ್ತಿ, ತಾರಕ್, ಚಂದ್ರಲೇಖ, ಗೀತಾ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿದಿಶಾ ಅವರು ಕನ್ನಡ ಸಿನಿಮಾ- ಹಿಂದಿ ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ.