ಬೆಂಗಳೂರಿನ ಬೆಡಗಿ ಶ್ರೀಲೀಲಾ (Sreeleela) ‘ಪುಷ್ಪ 2’ (Pushpa 2) ಚಿತ್ರದಲ್ಲಿ ಕಿಸ್ಸಿಕ್ ಬೆಡಗಿಯಾಗಿ ಮಿಂಚಿದ್ಮೇಲೆ ಬೇಡಿಕೆ ಇನ್ನೂ ಹೆಚ್ಚಾಗಿದೆ. ನಟಿಯ ಬಳಿ ಕೈತುಂಬಾ ಸಿನಿಮಾಗಳಿವೆ. 2025ರಲ್ಲಿ ಸಾಲು ಸಾಲು ಸಿನಿಮಾ ಮನರಂಜನೆ ಕೊಡೋದು ಗ್ಯಾರಂಟಿ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ರಿಲೀಸ್‌ಗೂ ಮುನ್ನ ಕೀರ್ತಿ ಸುರೇಶ್ ಟೆಂಪಲ್ ರನ್
Advertisement
ಪ್ರತಿಭೆ, ಡ್ಯಾನ್ಸ್ ಸ್ಕಿಲ್, ಬ್ಯೂಟಿಯೊಂದಿಗೆ ಸದ್ಯ ಸೌತ್‌ನಲ್ಲಿ ಸದ್ದು ಮಾಡುತ್ತಿರುವ ಕನ್ನಡತಿ ಶ್ರೀಲೀಲಾ ಲಿಸ್ಟ್‌ನಲ್ಲಿ 5ಕ್ಕೂ ಹೆಚ್ಚು ಸಿನಿಮಾಗಳಿವೆ. ನಿತಿನ್ ಜೊತೆಗಿನ ರಾಬಿನ್‌ಹುಡ್ ಚಿತ್ರ, ಪವನ್ ಕಲ್ಯಾಣ್ ಜೊತೆ ಉಸ್ತಾದ್ ಭಗತ್ ಸಿಂಗ್, ಧಮಾಕ ಬಳಿಕ ರವಿತೇಜ ಜೊತೆ 2ನೇ ಬಾರಿ ಹೊಸ ಚಿತ್ರಕ್ಕೆ ನಟಿ ಓಕೆ ಎಂದಿದ್ದಾರೆ. ‘ಮಾಸ್ ಜಾತ್ರ’ ಎಂದು ಟೈಟಲ್ ಇಡಲಾಗಿದೆ.
Advertisement
Advertisement
ಶಿವಕಾರ್ತಿಕೇಯನ್ ನಟನೆಯ 25ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಮೂಲಕ ತಮಿಳಿಗೆ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸುಧಾ ಕೊಂಗರ ನಿರ್ದೇಶನ ಮಾಡುತ್ತಿದ್ದಾರೆ. ಇದರೊಂದಿಗೆ ಜನಾರ್ಧನ್ ರೆಡ್ಡಿ ಪುತ್ರನ ಜೊತೆ ಕನ್ನಡದ ಸಿನಿಮಾ ಮಾಡುತ್ತಿದ್ದಾರೆ.
Advertisement
ಇನ್ನೂ ಶ್ರೀಲೀಲಾ ನಟನೆಯ ಮೊದಲ ಬಾಲಿವುಡ್ ಚಿತ್ರವನ್ನು ಸೈಫ್ ಪುತ್ರ ಇಬ್ರಾಹಿಂ ಅಲಿ ಖಾನ್ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ‘ದಿಲ್ಲರ್’ ಎಂದು ಟೈಟಲ್ ಇಡಲಾಗಿದೆಯಂತೆ. ಸದ್ಯ ನಟಿಯ ಸಿನಿಮಾ ಲಿಸ್ಟ್ ಕೇಳಿ ಫ್ಯಾನ್ಸ್ ಖುಷಿಪಡುತ್ತಿದ್ದಾರೆ.