‘ಕಿಸ್’ ನಟಿಗೆ ಅದೃಷ್ಟ- ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ಜೋಡಿ?

Public TV
1 Min Read
sreeleela

ನ್ನಡದ ನಟಿ ಶ್ರೀಲೀಲಾಗೆ (Sreeleela) ಟಾಲಿವುಡ್ ಬಳಿಕ ಬಾಲಿವುಡ್‌ನಲ್ಲೂ ಬೇಡಿಕೆ ಹೆಚ್ಚಾಗಿದೆ. ಕಾರ್ತಿಕ್ ಆರ್ಯನ್ ಸಿನಿಮಾಗೆ ನಾಯಕಿಯಾದ ಬಳಿಕ ಮತ್ತೊಂದು ಬಂಪರ್ ಆಫರ್‌ವೊಂದು ಗಿಟ್ಟಿಸಿಕೊಂಡಿದ್ದಾರೆ. ಲವರ್ ಬಾಯ್ ಸಿದ್ಧಾರ್ಥ್‌ಗೆ ನಾಯಕಿಯಾಗಿ ನಟಿಸಲು ಶ್ರೀಲೀಲಾಗೆ ಆಫರ್ ಸಿಕ್ಕಿದೆ ಎನ್ನಲಾದ ಸುದ್ದಿಯೊಂದು ಇದೀಗ ಹರಿದಾಡುತ್ತಿದೆ. ಇದನ್ನೂ ಓದಿ:ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಯಕ್ಷಗಾನ ‘ವೀರ ಚಂದ್ರಹಾಸ’ ಚಿತ್ರದ ಮೂಲಕ ಹೊಸ ಪ್ರಯೋಗ: ರವಿ ಬಸ್ರೂರು

sreeleela 6

ಈ ಹಿಂದೆ ‘ಡ್ರೀಮ್ ಗರ್ಲ್’ ಎಂಬ ಸಿನಿಮಾ ನಿರ್ದೇಶನದ ಮಾಡಿದ್ದ ರಾಜ್ ಶಾಂಡಿಲ್ಯ ಅವರು ಸಿದ್ಧಾರ್ಥ್ ಮಲ್ಹೋತ್ರಾಗೆ (Sidharth Malhotra) ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಇಬ್ಬರೂ ನಾಯಕಿಯರ ಜೊತೆ ಸಿದ್ಧಾರ್ಥ್ ರೊಮ್ಯಾನ್ಸ್ ಮಾಡಲಿದ್ದಾರೆ. ಹೀಗಾಗಿ ಕನ್ನಡದ ನಟಿ ಶ್ರೀಲೀಲಾ, ‘ಲೈಗರ್’ ನಟಿ ಅನನ್ಯಾ ಪಾಂಡೆ (Ananya Panday) ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಸಿನಿಮಾದಲ್ಲಿ ಅವರು ನಟಿಸ್ತಾರಾ ಎಂಬುದನ್ನು ಚಿತ್ರತಂಡವೇ ತಿಳಿಸಬೇಕಿದೆ. ಇದನ್ನೂ ಓದಿ:ಶ್ರೀಲೀಲಾ ಜೊತೆ ಹೋಲಿಕೆ ಮಾಡಿದ್ದಕ್ಕೆ ನಿಧಿ ಅಗರ್ವಾಲ್ ತಿರುಗೇಟು

sidharth malhotra 1

ಅಂದಹಾಗೆ, ‘ಪುಷ್ಪ 2’ (Pushpa 20 ಚಿತ್ರದಲ್ಲಿ ಕಿಸ್ಸಕ್ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಶ್ರೀಲೀಲಾ ಮೇಲಿನ ಪಡ್ಡೆಹುಡುಗರ ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ತೆಲುಗು, ಹಿಂದಿ, ತಮಿಳಿನಿಂದಲೂ ಪ್ರಮುಖ ಪಾತ್ರಕ್ಕಾಗಿ ನಟಿಗೆ ಅವಕಾಶಗಳು ಅರಸಿ ಬರುತ್ತಿವೆ.

sreeleela 1 4

ಶಿವಕಾರ್ತಿಕೇಯನ್ ಜೊತೆ ತಮಿಳು ಸಿನಿಮಾ, ಇಬ್ರಾಹಿಂ ಅಲಿ ಖಾನ್ ಜೊತೆ ಚಿತ್ರ, ಪವನ್ ಕಲ್ಯಾಣ್ ಜೊತೆ ತೆಲುಗು ಸಿನಿಮಾ, ಮಾಸ್ ಜಾತ್ರಾ, ಕಾರ್ತಿಕ್ ಆರ್ಯನ್ ಜೊತೆಗಿನ ‘ಆಶಿಕಿ 3’ ಚಿತ್ರದ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

Share This Article