ಬಹುಭಾಷಾ ನಟಿ ಕೀರ್ತಿ ಸುರೇಶ್ (Keerthy Suresh) ಮದುವೆ ಇತ್ತೀಚೆಗೆ ಗೋವಾದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಮದುವೆಯಲ್ಲಿ ಕನ್ನಡದ ‘ಗುಳ್ಟು’ ನಟಿ ಸೋನು ಗೌಡ (Sonu Gowda) ಭಾಗಿಯಾಗಿದ್ದು, ಸುಂದರ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಉಗ್ರಂ ಮಂಜು ಅಬ್ಬರಕ್ಕೆ ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್
View this post on Instagram
ಎರಡು ಸುಂದರ ಹೃದಯಗಳು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗುವುದು ತುಂಬಾ ಖುಷಿಯ ವಿಚಾರ. ಈ ಸುಂದರ ದಂಪತಿಗೆ ಮತ್ತೊಮ್ಮೆ ಹ್ಯಾಪಿ ಮ್ಯಾರೀಡ್ ಲೈಫ್, ನಿಮ್ಮ ಜೀವನ ಸುಂದರವಾಗಿರಲಿ ಎಂದು ನಟಿ ಸೋನು ಶುಭಹಾರೈಸಿದ್ದಾರೆ. ಮದುವೆಯಲ್ಲಿ ಕೀರ್ತಿ ದಂಪತಿ ಜೊತೆ ತೆಗೆದ ಸುಂದರ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.
View this post on Instagram
ಈ ಹಿಂದೆಯೇ ಸಂದರ್ಶನವೊಂದರಲ್ಲಿ ಕೀರ್ತಿ ಜೊತೆಗಿನ ಸ್ನೇಹದ ಬಗ್ಗೆ ಸೋನು ಮಾತನಾಡಿದ್ದರು. ಕಾಮನ್ ಫ್ರೆಂಡ್ ಮೂಲಕ ಕೀರ್ತಿ ಸುರೇಶ್ ಪರಿಚಯವಾಗಿದ್ದು, ಇದೀಗ ಸೋನು ಅವರಿಗೂ ಕೀರ್ತಿ ಬೆಸ್ಟ್ ಫ್ರೆಂಡ್ ಆಗಿದ್ದಾರೆ. ನಾವು ಫೋನ್‌ನಲ್ಲೂ ಮಾತನಾಡುತ್ತೇವೆ, ಆದರೆ ಸಿನಿಮಾ ಬಗ್ಗೆ ಮಾತನಾಡೋದಿಲ್ಲ, ಕೀರ್ತಿ ಅವರು ಆಹಾರ ಪ್ರಿಯೆ. ಹಾಗಾಗಿ ಆಹಾರದ ವಿಚಾರವಾಗಿ ಹೆಚ್ಚಾಗಿ ಮಾತನಾಡುತ್ತೇವೆ ಎಂದಿದ್ದರು ಸೋನು. ಹಾಗಾಗಿ ನಟಿಯ ಮದುವೆಯಲ್ಲಿ ಸೋನುಗೆ ವಿಶೇಷವಾಗಿ ಆಹ್ವಾನ ನೀಡಲಾಗಿತ್ತು.
ಇನ್ನೂ ಡಿ.12ರಂದು ಗೋವಾದಲ್ಲಿ ಆಂಟೋನಿ ತಟ್ಟಿಲ್ (Antony Thattil) ಜೊತೆ ಕೀರ್ತಿ ಮದುವೆಯಾದರು. ಈ ಮದುವೆಯಲ್ಲಿ ದಳಪತಿ ವಿಜಯ್, ತ್ರಿಷಾ, ಜವಾನ್ ಡೈರೆಕ್ಟರ್ ಅಟ್ಲಿ ದಂಪತಿ, ಕಲ್ಯಾಣಿ ಪ್ರಿಯಾದರ್ಶನ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದರು.