Bigg Boss: ಕನ್ನಡದ ನಟಿ ಶೋಭಾ ಶೆಟ್ಟಿ ಆಟಕ್ಕೆ ದಂಗಾದ ದೊಡ್ಮನೆ ಸ್ಪರ್ಧಿಗಳು

Public TV
1 Min Read
shobha shetty

‘ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ನಾಗಾರ್ಜುನ (Nagarjuna) ನಿರೂಪಣೆಯ ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿ ಕಮಾಲ್ ಮಾಡ್ತಿದ್ದಾರೆ. ಕನ್ನಡದ ನಟಿಯ ಆಟ ನೋಡಿ, ಇವ್ರು ಕನ್ನಡದ ಬಿಗ್ ಬಾಸ್ ಸೀಸನ್ 10ನಲ್ಲಿ ಇರಬಾರದಿತ್ತಾ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್- ಬ್ಲೌಸ್ ಧರಿಸದೇ ಸೀರೆಯುಟ್ಟ ನಿಹಾರಿಕಾ

shobha shettyತೆಲುಗು ಬಿಗ್ ಬಾಸ್ ಸೀಸನ್-7 ಇದೀಗ 60 ದಿನಗಳನ್ನ ಪೂರೈಸಿದೆ. ಬೆಂಗಳೂರಿನ ಬೆಡಗಿ ಶೋಭಾ, ದೊಡ್ಮನೆಯಲ್ಲಿ ರೆಬೆಲ್ ಆಗಿ ಆಟ ಆಡ್ತಿದ್ದಾರೆ. ಅವರ ಆಟಕ್ಕೆ ಮನೆ ಮಂದಿ ಗಪ್ ಚುಪ್ ಆಗಿದ್ದಾರೆ. ಶೋಭಾ ಖಡಕ್ ಆಟ ನೋಡಿ, ಅಯ್ಯೋ ಇವರು ಕನ್ನಡದ ಬಿಗ್ ಬಾಸ್ ಶೋನಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಖತ್‌ ಟ್ರೋಲ್‌ (Troll) ಕೂಡ ಆಗ್ತಿದೆ.

sangeetha sringeriಎದುರಾಳಿಯ ಮಾತಿಗೆ ಕೌಂಟರ್ ಕೊಡೋ ಶೋಭಾ ಆಟಕ್ಕೆ ನೋಡಿ‌, ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಕನ್ನಡದ ಶೋನಲ್ಲಿ ಶೋಭಾ ಇಲ್ಲ ಅಂತ ಬೇಸರ ಮಾಡಿಕೊಳ್ಳಬೇಡಿ. ಕನ್ನಡದಲ್ಲಿ ಸಂಗೀತಾ- ತನಿಷಾ ಮಾಸ್ ಆಗಿ ಆಟ ಆಡ್ತಿದ್ದಾರೆ. ಶೋಭಾರಂತಯೇ ಇಲ್ಲಿಯೂ ಕೂಡ ಠಕ್ಕರ್ ಕೊಡುವವರು ಇದ್ದಾರೆ ಎಂದು ಅನೇಕರು ಕಾಮೆಂಟ್ ಮಾಡ್ತಿದ್ದಾರೆ.

ಒಟ್ನಲ್ಲಿ ಕನ್ನಡದ ‘ಬಿಗ್ ಬಾಸ್’ ಜೊತೆ ಪರಭಾಷೆಯ ಬಿಗ್ ಬಾಸ್ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Share This Article