ಕನ್ನಡದ ನಟಿ ಶೋಭಾ ಶೆಟ್ಟಿ (Shobha Shetty) ಅವರು ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ (Yashwanth Reddy) ಜೊತೆ ಶೋಭಾ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:‘ಗೌರಿಶಂಕರ’ ಸೀರಿಯಲ್‌ಗೆ ಗುಡ್ ಬೈ ಹೇಳಿದ ಕೌಸ್ತುಭ ಮಣಿ
ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಅವರು ‘ಬಿಗ್ ಬಾಸ್ ಸೀಸನ್ 7’ ತೆಲುಗಿನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ದೊಡ್ಮನೆ ವೇದಿಕೆಯಲ್ಲಿ ಶೋಭಾ ಅವರ ಬಾಯ್‌ಫ್ರೆಂಡ್ ಯಾರು ಎಂಬುದು ರಿವೀಲ್ ಆಗಿತ್ತು. ಯಶವಂತ್ ಎಂಗೇಜ್ ಆಗಿರುವ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದರು.
ಜನವರಿ 20ರಂದು ಶೋಭಾ ಅವರ ಹುಟ್ಟುಹಬ್ಬದಂದು ಯಶವಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ತಾಂಬೂಲ ಬದಲಿಸಿದ್ದು, ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ. ಸದ್ಯದಲ್ಲೇ ಮದುವೆ ಎಂದು ಹೇಳಲಾಗುತ್ತಿದೆ.
ಕನ್ನಡದ ಹುಡುಗಿಗೆ ಸದ್ಯ ತೆಲುಗಿನಲ್ಲಿ ಭಾರೀ ಬೇಡಿಕೆ ಇದೆ. ‘ಬಿಗ್ ಬಾಸ್’ ನಂತರ ತೆಲುಗು ಸಿನಿಮಾ ಮತ್ತು ಕನ್ನಡ ಸಿನಿಮಾರಂಗದಿಂದ ಕೂಡ ಆಫರ್‌ಗಳು ಅರಸಿ ಬರುತ್ತಿದೆ.