ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ‘ಸಿಕಂದರ್’ ಸೋಲಿನ ಬಳಿಕ ‘ಥಾಮಾ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್‌ಗಾಗಿ ಊಟಿಯಲ್ಲಿ (Ooty) ನಟಿ ಬೀಡುಬಿಟ್ಟಿದ್ದಾರೆ. ಈ ಕುರಿತು ಸ್ವತಃ ರಶ್ಮಿಕಾ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಿರ್ಮಾಪಕಿಯಾದ ರಾಕಿಂಗ್ ಸ್ಟಾರ್ ಯಶ್ ತಾಯಿ
ಆಯುಷ್ಮಾನ್ ಖುರಾನ ನಟನೆಯ ‘ಥಾಮಾ’ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಸದ್ಯ ಚಿತ್ರತಂಡದ ಜೊತೆ ತಮಿಳುನಾಡಿನ ಊಟಿಯಲ್ಲಿ ‘ಥಾಮಾ’ ಶೂಟಿಂಗ್ ಭರದಿಂದ ನಡೆಯುತ್ತಿದೆ. ಊಟಿಯ ಫೋಟೋ ಶೇರ್ ಮಾಡಿ, ಕೆಲವು ದಿನಗಳ ಕಾಲ ಊಟಿ ಎಂದು ರಶ್ಮಿಕಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಚಿತ್ರದ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಉಗ್ರರ ದಾಳಿ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿದ ಅತುಲ್ ಕುಲಕರ್ಣಿ
ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣಗೆ ಭಾರೀ ಬೇಡಿಕೆಯಿದೆ. ಇತ್ತೀಚಿನ ಅನಿಮಲ್, ಪುಷ್ಪ 2, ಛಾವಾ ಈ 3 ಸಿನಿಮಾಗಳು ಭರ್ಜರಿ ಸಕ್ಸಸ್ ಕಂಡಿದೆ. ‘ಸಿಕಂದರ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ್ರೂ ರಶ್ಮಿಕಾಗಿರುವ ಬೇಡಿಕೆ ಕಮ್ಮಿಯಾಗಿಲ್ಲ.
ದಿ ಗರ್ಲ್‌ಫ್ರೆಂಡ್, ಪುಷ್ಪ 3, ರೈನ್‌ಬೋ, ಶಾಹಿದ್ ಕಪೂರ್ ಜೊತೆಗಿನ ಕಾಕ್‌ಟೈಲ್ 2 ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.