ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ

Public TV
2 Min Read
Rashmika Mandanna 1 1

ಶ್ಮಿಕಾ ಮಂದಣ್ಣ (Rashmika Mandanna) ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಕನ್ನಡದ ನಟಿಗೆ ಮೊದಲ ಬಾರಿ ಅಂಥ ಸ್ಥಾನ ನೀಡಿದ ಆ ಜಾಗಕ್ಕೆ ಸಲಾಂ ಹೊಡೆದಿದ್ದಾರೆ. ಭಾರತದ ಮೂವತ್ತು ಸೆಲೆಬ್ರಿಟಿಗಳ ಮಹಾ ಪಟ್ಟಿಯಲ್ಲಿ ರಶ್ಮಿಕಾ ಕೂಡ ಒಬ್ಬರಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅದ್ಯಾವ ಕಿರೀಟ ಇವರನ್ನು ಹುಡುಕಿಕೊಂಡು ಬಂದಿತು? ಮೊದಲ ಬಾರಿ ಕನ್ನಡಕ್ಕೆ ದಕ್ಕಿದ್ದು ಹೇಗೆ ಈ ಸಿಂಹಾಸನ? ಇಲ್ಲಿದೆ ಮಾಹಿತಿ.

Rashmika Mandanna

ರಶ್ಮಿಕಾ ಮಂದಣ್ಣ ಈಗ ಬರೀ ಕನ್ನಡದ ನಟಿ ಅಲ್ಲ. ಕನ್ನಡ ಸಿನಿಮಾಗಳಲ್ಲಿ ಅವರು ನಟಿಸುವುದು ಬಿಟ್ಟು ವರ್ಷಗಳು ಕಳೆದಿವೆ. ಈಗ ಅವರು ನ್ಯಾಶನಲ್ ಲೆವೆಲ್ ಸ್ಟಾರ್. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೆರೆಯುತ್ತಿದ್ದಾರೆ. ‘ಪುಷ್ಪ’ (Pushpa) ಮತ್ತು ‘ಅನಿಮಲ್’ (Animal) ಸಕ್ಸಸ್ ಬಳಿಕ ಅದು ಇನ್ನೂ ಹೆಚ್ಚಾಗಿದೆ. ಇದೀಗ ಅದಕ್ಕೆ ಮಹಾ ಗರಿ ಸಿಕ್ಕಿದೆ. ಅದೇ ಫೋರ್ಬ್ಸ್ ಇಂಡಿಯಾ ಪತ್ರಿಕೆಯ 30 ಸಕ್ಸಸ್‌ಫುಲ್ ಸೆಲೆಬ್ರಿಟಿಗಳ ಪಟ್ಟಿನಲ್ಲಿ ಸಾನ್ವಿ ಕೂಡ ಸ್ಥಾನ ಪಡೆದಿದ್ದಾರೆ. ಕನ್ನಡದ ನಟಿಯೊಬ್ಬರು ಮೊದಲ ಬಾರಿ ಫೋರ್ಬ್ಸ್ ಇಂಡಿಯಾದಲ್ಲಿ ಹೀಗೆ ಹೊಳೆಯುತ್ತಿದ್ದಾರೆ. 27 ವರ್ಷದ ಶ್ರೀವಲ್ಲಿಗೆ ಇನ್ನು ಹಿಡಿಯೋರು ಯಾರು? ಇದನ್ನೂ ಓದಿ:ಡಿಬಾಸ್ ಹುಟ್ಟುಹಬ್ಬಕ್ಕೆ ‘ಬಿಗ್ ಬಾಸ್’ ಇಶಾನಿ ಸ್ಪೆಷಲ್ ಸಾಂಗ್ ರಿಲೀಸ್

‘ಕಿರಿಕ್ ಪಾರ್ಟಿ’ಯಿಂದ (Kirik Party) ಹೊರಟ ರಶ್ಮಿಕಾ ಮೆರವಣಿಗೆ ಟಾಲಿವುಡ್, ಕಾಲಿವುಡ್ (Kollywood) ದಾಟಿ ಬಾಲಿವುಡ್‌ಗೆ ಹೋಗಿ ನಿಂತಿದೆ. ಇನ್ನೇನು ಅಲ್ಲಿ ಆಟ ನಡೆಯಲ್ಲ ಎನ್ನುವ ಹೊತ್ತಿಗೆ ‘ಅನಿಮಲ್’ ಗೆಲುವು ಅದನ್ನು ಸುಳ್ಳು ಮಾಡಿತು. ಹೀಗಾಗಿ ರಶ್ಮಿಕಾ ಬರೋಬ್ಬರಿ ಮೂರು 4 ಕೋಟಿ ಕೋಟಿಪಡೆಯುತ್ತಿದ್ದಾರೆ. ಅದೇನೆ ಇರಲಿ, ಫೋರ್ಬ್ಸ್ ಪಟ್ಟಿಯಲ್ಲಿ (Forbes India) ಜಾಗ ಪಡೆಯುವುದು ಸಾಮಾನ್ಯ ಅಲ್ಲ. ಅದು ರಶ್ಮಿಕಾಗೆ ಸಿಕ್ಕಿದೆ. ಇದು ಕೊಡುವ ಕಿಕ್ಕು ಅಂತಿಂಥದ್ದಲ್ಲ. ಹೀಗಾಗಿ ರಶ್ಮಿಕಾ ಇನ್ನು ಮುಂದೆ ಇನ್ನಷ್ಟು ಸಿನಿಮಾಗಳಲ್ಲಿ ಕಾಣಿಸುತ್ತಾ. ಅವರಿವರಿಗೆ ಹೊಟ್ಟೆ ಉರಿಸುತ್ತಾ ಬೆಳೆಯಲಿ ಎಂಬುದು ಅಭಿಮಾನಿಗಳ ಆಶಯ.

ಪುಷ್ಪ 2, ಅನಿಮಲ್ 2, ರೈನ್‌ಬೋ, ಚಾವಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ. ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ.

Share This Article