ಮಂಗಳೂರು: ಕೆಂಪೇಗೌಡನ ಅರಗಿಣಿ ಹಾಗೂ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಗುರುವಾರ ಕರಾವಳಿ ನಗರ ಮಂಗಳೂರಿಗೆ ಭೇಟಿ ನೀಡಿ ಮೀನಿನ ಖಾದ್ಯವನ್ನು ಸವಿದಿದ್ದಾರೆ.
ನಗರದ ಮಣ್ಣಗುಡ್ಡದಲ್ಲಿರುವ ನಂದಿನಿ ಫಿಶ್ ಬೌಲ್ ರೆಸ್ಟೋರೆಂಟ್‍ಗೆ ಮಧ್ಯಾಹ್ನ ದಿಢೀರನೆ ಭೇಟಿ ನೀಡಿ ನಟಿ ರಾಗಿಣಿ ಕರಾವಳಿಯ ತಾಜಾ ಮೀನಿನ ಖಾದ್ಯಗಳಾದ ಅಂಜಲ್ ಫ್ರೈ, ಪ್ರಾವ್ನ್ಸ್ ಗೀ ರೋಸ್ಟ್ ಮತ್ತು ಫಿಶ್ ಕರಿ ರೈಸ್‍ಯನ್ನು ಭರ್ಜರಿಯಾಗಿ ತಿಂದು ತೇಗಿದ್ದಾರೆ.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಲು ಬಂದಿದ್ದ ಖ್ಯಾತ ಬಹುಭಾಷಾ ನಟಿ ರಾಗಿಣಿಯವರು ದಿಢೀರ್ ಭೇಟಿ ನೀಡಿರುವುದು ಕಂಡು ಹೋಟೆಲ್ ಮಾಲೀಕನಿಗೆ ಹಾಗೂ ಗ್ರಾಹಕರಿಗೆ ಸಂತೋಷ ತಂದಿದೆ. ರಾಗಿಣಿ ರೆಸ್ಟೋರೆಂಟ್‍ಗೆ ಬಂದಿರುವುದು ನೋಡಿ ಹೊಟೇಲ್‍ನ ಮಾಲೀಕ ಅನುಪ್ ಫುಲ್ ಖುಷ್ ಆಗಿದ್ದರೆ ಹಾಗೂ ರೆಸ್ಟೋರೆಂಟ್‍ನಲ್ಲಿದ್ದ ಜನರು ಮಾತ್ರ ಸೆಲ್ಫಿಗಾಗಿ ಮುಗಿಬಿದಿದ್ದರು. ತಮ್ಮ ಫ್ಯಾನ್ಸ್ ಮೇಲೆ ಪ್ರೀತಿ ಹೊಂದಿರುವ ರಾಗಿಣಿ ಕೂಡ ಅವರೊಂದಿಗೆ ಒಂದೆರಡು ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಈಗಾಗಲೇ ಕನ್ನಡ ಸಿನಿಮಾಗಳಿಗೆ ಸೈನ್ ಮಾಡಿರುವ ನಟಿ ರಾಗಿಣಿ ತಮ್ಮ ತೂಕವನ್ನು ಗಣನೀಯ ಪ್ರಮಾಣದಲ್ಲಿ ಇಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಬೇಕಾಗಿರುವ ಡಯೆಟ್ ಚಾರ್ಟ್‍ಯನ್ನು ಕೂಡ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಮಂಗಳೂರಿಗೆ ಬಂದ ರಾಗಿಣಿಯವರು ಅಂಜಲ್ ಫ್ರೈ ಹಾಗೂ ಇತರ ಖಾದ್ಯಗಳಿಗೆ ಮನಸೋತು ತಮ್ಮ ಎಲ್ಲಾ ಡಯಟ್ ಪ್ಲಾನ್‍ಗಳನ್ನು ಮರೆತು ಹೊಟ್ಟೆ ತುಂಬಾ ತಿಂದಿದ್ದಾರೆ.