ಪಹಲ್ಗಾಮ್‌ನಲ್ಲಿ ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ: ಉಗ್ರರ ದಾಳಿ ಬಗ್ಗೆ ರಾಗಿಣಿ ಕಿಡಿ

Public TV
1 Min Read
ragini dwivedi

ಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಉಗ್ರರ ದಾಳಿ ಬಗ್ಗೆ ನಟಿ ರಾಗಿಣಿ ದ್ವಿವೇದಿ (Ragini Dwivedi) ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ. ಕಾಶ್ಮೀರದಲ್ಲಿ ಹೀಗೆ ನಡೆದಿರೋದು ಅತ್ಯಂತ ದುರದೃಷ್ಟಕರ. ಇದಕ್ಕೆ ಸ್ಟ್ರಾಂಗ್ ಆಗಿ ಆ್ಯಕ್ಷನ್ ತೆಗೆದುಕೊಳ್ಳಬೇಕು ಎಂದು ನಟಿ ಮಾತನಾಡಿದ್ದಾರೆ.‌ ಇದನ್ನೂ ಓದಿ:‘ಜೈಲರ್ 2’ ಶೂಟಿಂಗ್ ನಡುವೆ ರಜನಿಕಾಂತ್ ಟೆಂಪಲ್ ರನ್

Ragini Dwivedi 3

ಕಾಶ್ಮೀರದಲ್ಲಿನ ಘಟನೆ ತುಂಬಾ ಬೇಜಾರ್ ಆಗೋ ವಿಷಯ. ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ. ನೋಡಿದ್ರೆ ತುಂಬಾ ಕೋಪ ಬರುತ್ತದೆ. ಪ್ರತಿಯೊಂದು ಧರ್ಮವನ್ನು ನಾವು ಸಮನಾಗಿ ನೋಡುತ್ತೇವೆ. ಕಾಶ್ಮೀರದಲ್ಲಿ ಹೀಗೆ ನಡೆದಿರೋದು ಅತ್ಯಂತ ದುರದೃಷ್ಟಕರ. ಈ ಘಟನೆ ಬಗ್ಗೆ ಸ್ಟ್ರಾಂಗ್ ಆಗಿ ಹೆಜ್ಜೆ ಇಡಬೇಕು ಎಂಬುದು ನನ್ನ ಅಭಿಪ್ರಾಯ. ಮತ್ತೆ ಹೀಗೆ ಆಗದೇ ಇರುವಂತೆ ನೋಡಿಕೊಳ್ಳಬೇಕು. ನಮ್ಮ ಜಗತ್ತಿನಲ್ಲಿ ಪ್ರೀತಿ ಮತ್ತು ನೆಮ್ಮದಿ ಬೇಕು ಅಷ್ಟೇ ಮಾತನಾಡಿದ್ದಾರೆ. ಇದನ್ನೂ ಓದಿ:ನಾವಿಬ್ಬರೂ ಮೂವರಾಗಿ ಇಂದಿಗೆ 3 ತಿಂಗಳು: ಮಗನ ಫೋಟೋ ಹಂಚಿಕೊಂಡ ಹರಿಪ್ರಿಯಾ ದಂಪತಿ

Ragini Dwivedi 2

ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ.

Share This Article