Mother’s Day 2025: ಅಮ್ಮನ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್

Public TV
1 Min Read
radhika pandit

ಗತ್ತಿನಲ್ಲಿ ತಾಯಿಯ ಸ್ಥಾನ ವಿಶಿಷ್ಠ ಮತ್ತು ವಿಶೇಷವಾದದ್ದು. ಈ ಹಿನ್ನೆಲೆ ಮೇ 11ರಂದು ವಿಶ್ವ ತಾಯಂದಿರ ದಿನಾಚರಣೆಯನ್ನು (Mother’s Day 2025) ಜಗತ್ತಿನೆಲ್ಲೆಡೆ ಆಚರಿಸುತ್ತಾರೆ. ಇದೀಗ ಸ್ಯಾಂಡಲ್‌ವುಡ್ ತಾರೆಯರು ಕೂಡ ತಾಯಿಯೊಂದಿಗಿನ ಫೋಟೋ ಶೇರ್ ಮಾಡಿ ಅಮ್ಮನ ಜೊತೆಗಿನ ಒಡನಾಟವನ್ನು ಬಣ್ಣಿಸಿದ್ದಾರೆ. ಅದರಲ್ಲಿ ರಾಧಿಕಾ ಪಂಡಿತ್ (Radhika Pandit) ಹಂಚಿಕೊಂಡಿರುವ ಮದರ್ಸ್‌ ಡೇ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಜಾನ್ವಿ ಕಪೂರ್‌ಗೆ ಗೇಟ್ ಪಾಸ್ – ಶ್ರೀಲೀಲಾಗೆ ಬಿಗ್ ಚಾನ್ಸ್

radhika pandit 1

ಮುದ್ದಾದ ಮಕ್ಕಳು ಮತ್ತು ಅಮ್ಮ ಮಂಗಳ ಪಂಡಿತ್ ಜೊತೆಗಿನ ಫೋಟೋ ಶೇರ್ ಮಾಡಿ, ಅವಳ ಕೈ ಹಿಡಿದು, ಕೈ ಹಿಡಿಯುವ ಕೈಯಾಗಿ ಬದಲಾಗುವವರೆಗೆ. ತಾಯ್ತನವು ಹೃದಯದಿಂದ ಹೃದಯಕ್ಕೆ ಹಾದುಹೋಗುವ ಕಥೆ. ಪಾಠಗಳಿಗೆ, ಪ್ರೀತಿಗೆ ಮತ್ತು ಪರಂಪರೆಗೆ ಕೃತಜ್ಞತೆ. ಪೀಳಿಗೆಗಳನ್ನು ರೂಪಿಸುವ ಮಹಿಳೆಯರಿಗೆ ಅಮ್ಮಂದಿರ ದಿನದ ಶುಭಾಶಯಗಳು ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಉರಿ, ದಂಗಲ್ ಸಿನಿಮಾಗಳ ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ನಿಧನ

ಪಿಂಕ್ ಬಣ್ಣದ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ. ಮಕ್ಕಳಾದ ಐರಾ ಮತ್ತು ಯಥರ್ವ್ ಹಾಗೂ ಅಮ್ಮನ ಜೊತೆ ನಿಂತು ರಾಧಿಕಾ ಫೋಟೋಗೆ ಪೋಸ್ ನೀಡಿದ್ದಾರೆ. ನಟಿಯ ಹೊಸ ಪೋಸ್ಟ್ ನೋಡಿ ಅಭಿಮಾನಿಗಳು ಸಂತೂರ್ ಮಮ್ಮಿ ಎಂದು ಹೊಗಳಿದ್ದಾರೆ.

radhika pandit 4

ರಾಧಿಕಾ ಅವರ ಬಾಲ್ಯದಿಂದ ಇಂದಿನವರೆಗೂ ನಟಿಯ ಜರ್ನಿಗೆ ತಾಯಿ ಮಂಗಳ ಪಂಡಿತ್ (Mangala Pandit) ಸಾಥ್ ನೀಡುತ್ತಲೇ ಬಂದಿದ್ದಾರೆ. ಅದರಲ್ಲೂ ಬಣ್ಣದ ಲೋಕಕ್ಕೆ ಬಂದ್ಮೇಲೆ ಸದಾ ರಾಧಿಕಾ ಜೊತೆಯೇ ಇದ್ದು ಅವರ ಕೆಲಸಗಳಿಗೆ ಸಾಥ್ ನೀಡುತ್ತಿದ್ದರು. ಐರಾ ಮತ್ತು ಯಥರ್ವ್ ಪಾಲನೆಯಲ್ಲೂ ತಾಯಿ ಮಂಗಳ ಅವರು ಸದಾ ಜೊತೆಯಾಗಿ ನಿಂತಿದ್ದಾರೆ. ಅಜ್ಜಿಯೊಂದಿಗೆ ಮೊಮ್ಮಕ್ಕಳು ಕೂಡ ಉತ್ತಮ ಒಡನಾಟ ಹೊಂದಿದ್ದಾರೆ.

Share This Article