ಕನ್ನಡದ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಮದುವೆಯಾಗಿ, ಮಗು ಆದ್ಮೇಲೆ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿರುವ ಪ್ರಣಿತಾ ಮಾಲಿವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಮಲಯಾಳಂನ ‘ಥಂಕಮಣಿ’ ಚಿತ್ರದ ಪ್ರಣಿತಾರ ಫಸ್ಟ್ ಲುಕ್ ರಿವೀಲ್ ಆಗಿದೆ.
ಮಾಲಿವುಡ್ (Mollywood) ನಟ ದಿಲೀಪ್‌ಗೆ ನಾಯಕಿಯಾಗಿ ಪ್ರಣಿತಾ ನಟಿಸಿದ್ದಾರೆ. ಐಪಿಎಸ್ ಅಧಿಕಾರಿಯಾಗಿ ಅರ್ಪಿತಾ ಎಂಬ ಪಾತ್ರಕ್ಕೆ ನಟಿ ಬಣ್ಣ ಹಚ್ಚಿದ್ದಾರೆ. ನಿಜ ಕಥೆ ಆಧರಿಸಿ ‘ಥಂಕಮಣಿ’ ಎಂಬ ಸಿನಿಮಾ ಮಾಡಲಾಗಿದೆ. ಇದನ್ನೂ ಓದಿ:ಗಲ್ಫ್ ರಾಷ್ಟ್ರಗಳಲ್ಲಿ ‘ಆರ್ಟಿಕಲ್ 370’ ಸಿನಿಮಾ ಬ್ಯಾನ್
ಈ ಚಿತ್ರಕ್ಕೆ ರತೀಶ್ ನಿರ್ದೇಶನ ಮಾಡಿದ್ದಾರೆ. ಪ್ರಣಿತಾ ಜೊತೆ ನೀತಾ ಪಿಳ್ಳೈ ಕೂಡ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಜಾನ್ ವಿಜಯ್, ಸಂಪತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
View this post on Instagram
ದಿಲೀಪ್‌ಗೆ (Dileep) ಜೋಡಿಯಾಗಿ ಮೊದಲ ಬಾರಿಗೆ ಮಲಯಾಳಂ ಎಂಟ್ರಿ ಕೊಡ್ತಿರೋ ಪ್ರಣಿತಾ ಈ ಚಿತ್ರದ ಹೆಚ್ಚಿನ ನಿರೀಕ್ಷೆತಯಿದೆ. ಮಗು ಆದ್ಮೇಲೆ ಈ ಸಿನಿಮಾ ಮಾಡುತ್ತಿರುವ ಕಾರಣ, ಪ್ರಣಿತಾ ಪಾಲಿಗೆ ಇದು ವಿಶೇಷವಾದ ಪ್ರಾಜೆಕ್ಟ್ ಆಗಿದೆ. ಚಿತ್ರದಲ್ಲಿನ ಪ್ರಣಿತಾ ಲುಕ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಮಲಯಾಳಂ ಸಿನಿಮಾ ಜೊತೆ ತೆಲುಗಿನ ಶೋವೊಂದಕ್ಕೆ ಜಡ್ಜ್ ಆಗಿ ಪ್ರಣಿತಾ ಸಾಥ್ ನೀಡಿದ್ದಾರೆ. ಕನ್ನಡದ ‘ರಾಮನ ಅವತಾರ’ ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ. ಇದರ ಜೊತೆ ಕನ್ನಡ ಸಿನಿಮಾಗಳ ಕಥೆಯನ್ನು ಕೂಡ ಕೇಳ್ತಿದ್ದಾರೆ. ಇದರ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್ ಸಿಗಲಿದೆ.