ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ನೇಹಾ ಪಾಟೀಲ್ ಕಂಕಣ ಭಾಗ್ಯ ಕೂಡಿ ಬಂದಿದ್ದು ಮುಂದಿನ ವಾರ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.
ಅ. 19 ರಂದು ಬೆಂಗಳೂರಿನಲ್ಲಿ ಎಂಜಿನಿಯರ್ ಪ್ರಣವ್ ಜೊತೆ ನೇಹಾ ಪಾಟೀಲ್ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಹುಬ್ಬಳ್ಳಿ ಮೂಲದ ನೇಹಾ ಸಂಕ್ರಾಂತಿ, ಸಂಯುಕ್ತ, ಸಿತಾರಾ, ವರ್ಧನ, ಟೈಟ್ಲು ಬೇಕಾ, ಚಿತ್ರಗಳಲ್ಲಿ ನಟಿಸಿದ್ದಾರೆ.
Advertisement
Advertisement
ಸದ್ಯ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ನೇಹಾ ಮುಂದಿನ ವರ್ಷ ಪ್ರಣವ್ ಜೊತೆ ಫೆಬ್ರವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಹಿರಿಯರ ನಿಶ್ಚಯದ ಮೇರೆಗೆ ನೇಹಾ ಈ ಮದುವೆಗೆ ಒಪ್ಪಿಕೊಂಡಿದ್ದಾರೆ. ಇದೀಗ ನೇಹಾ ನಾಲ್ಕು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಮದುವೆಯ ಬಳಿಕವೂ ಅಭಿನಯ ಮುಂದುವರಿಸಲು ನೇಹಾ ನಿರ್ಧರಿಸಿದ್ದಾರೆ. ಅಭಿನಯಕ್ಕೆ ಪತಿ ಮನೆ ಕಡೆಯಿಂದ ಅಡ್ಡಿ ಇಲ್ಲದಿರೋದಾಗಿ ನೇಹಾ ಕುಟುಂಬ ತಿಳಿಸಿದೆ.
Advertisement
ಉಳಿದಂತೆ ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಅದೃಷ್ಟ ಪರೀಕ್ಷೆ ನಡೆಸಿದ್ದ ನೇಹಾ ಪಾಟೀಲ್ ಸಾಕಷ್ಟು ಪ್ರಶಂಸೆ ಗಳಿಸಿದ್ದರು. ಇದುವರೆಗೂ ನೇಹಾ ಅವರು ಆಯ್ಕೆ ಮಾಡಿಕೊಂಡಿರುವ ಚಿತ್ರದ ಪಾತ್ರಗಳು ಸಾಕಷ್ಟು ಭಿನ್ನವಾಗಿದ್ದು, ಸವಾಲಿನಿಂದ ಕೂಡಿತ್ತು. ಇದರೊಂದಿಗೆ ನೇಹಾ ಪಾಟೀಲ್ ಉತ್ತಮ ಡ್ಯಾನ್ಸರ್ ಕೂಡ ಆಗಿದ್ದು, ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿ ಫೈನಲ್ ಪ್ರವೇಶ ಮಾಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv