ಕುಡ್ಲದ ಬೆಡಗಿ ಜ್ಯೋತಿ ರೈ (Jyothi Rai) ಪ್ರಸ್ತುತ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹಾಟ್ ಫೋಟೋ ಶೇರ್ ಮಾಡಿ ಇನ್ಮೇಲೆ ನನಗೆ ಕಾಮೆಂಟ್ ಮಾಡಬೇಡಿ ಎಂದಿದ್ದಾರೆ. ನಟಿಯ ಹೊಸ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಮತ್ತೆ ಸಿನಿಮಾಗೆ ದೀಪಿಕಾ ದಾಸ್ ಕಮ್‌ಬ್ಯಾಕ್- ‘ಪಾರು ಪಾರ್ವತಿ’ ಸಿನಿಮಾದಲ್ಲಿ ನಟಿ
- Advertisement -
ಸದಾ ಒಂದಲ್ಲಾ ಒಂದು ಬೋಲ್ಡ್ ಫೋಟೋಶೂಟ್‌ಗಳ ಮೂಲಕ ಸದ್ದು ಮಾಡುವ ಜ್ಯೋತಿ ರೈಗೆ ಅಶ್ಲೀಲ ಕಾಮೆಂಟ್‌ಗಳ ಕಾಟ ಹೆಚ್ಚಾಗಿದೆ. ಹಾಗಾಗಿ ನಟಿ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕಾಮೆಂಟ್ ಸೆಕ್ಷನ್ ಆಫ್ ಮಾಡುವ ನಿರ್ಧಾರಕ್ಕೆ ಬಂದಿರೋದಾಗಿ ಇದೀಗ ನಟಿ ತಿಳಿಸಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನು ಇನ್ಮುಂದೆ ನೇರವಾಗಿ ಇನ್‌ಬಾಕ್ಸ್‌ನಲ್ಲಿ ಮೆಸೇಜ್ ಮಾಡುವ ಮೂಲಕ ತಿಳಿಸಿ ಎಂದಿದ್ದಾರೆ ಜ್ಯೋತಿ ರೈ.
- Advertisement -
View this post on Instagram
- Advertisement -
ಇತ್ತೀಚೆಗೆ ಕೆಟ್ಟ ಮೆಸೇಜ್‌ಗಳ ಕುರಿತು ನಟಿ ಮಾತನಾಡಿದ್ದರು. ಇನ್ಸ್ಟಾಗ್ರಾಂ ಬ್ಲಾಕ್ ಫೀಚರ್ ಅನ್ನು ನಾನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ಕಾಮೆಂಟ್ ಸೆಕ್ಷನ್‌ನಲ್ಲಿ ಕೆಟ್ಟ ಹಾಗೂ ಅಗೌರವದಿಂದ ಮೆಸೇಜ್ ಮಾಡುವ ಮೂಲಕ ಕೆಟ್ಟ ವರ್ತನೆ ತೋರಿದ್ದ 1 ಸಾವಿರಕ್ಕೂ ಅಧಿಕ ವೈಯಕ್ತಿಕ ಖಾತೆಗಳನ್ನು ನಾನು ತೆಗೆದು ಹಾಕಿದ್ದೇನೆ. ಅವರೊಂದಿಗೆ ಮಾತುಕತೆ ಮಾಡುವ ಮೂಲಕ ಚರ್ಚೆ ಮಾಡೋದು ನನಗೆ ಇಷ್ಟವಿಲ್ಲ. ಪಾಸಿಟಿವ್ ಆಗಿ ಪರಿಸರವನ್ನು ರಚನೆ ಮಾಡಲು ನೀವು ಕೂಡ ಇಂಥ ಟೂಲ್‌ಗಳನ್ನು ಬಳಕೆ ಮಾಡಿ ಎಂದಿದ್ದರು. ಈ ವಿಚಾರದಲ್ಲಿ ಯಾರಾದರೂ ಕಲಿಯಬೇಕು ಎಂದಿದ್ದರೆ, ಅದಕ್ಕೆ ನಾನು ಸ್ವಾಗತ ನೀಡುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿ ರೈ ಬರೆದುಕೊಂಡಿದ್ದರು.
- Advertisement -
ಅದಷ್ಟೇ ಅಲ್ಲ, ಜ್ಯೋತಿ ರೈ ಬಿಗ್ ಬಾಸ್ ಬರುವ ಬಗ್ಗೆ ಹಬ್ಬಿದ್ದ ವದಂತಿಗೆ ಕ್ಲ್ಯಾರಿಟಿ ಕೊಟ್ಟಿದ್ದರು. ನಾನು ಕನ್ನಡ ‘ಬಿಗ್ ಬಾಸ್’ ಶೋನಲ್ಲಿ ಸ್ಪರ್ಧಿಸುವ ಬಗ್ಗೆ ಅನೇಕರು ನನ್ನನ್ನು ಕೇಳ್ತಿದ್ದಾರೆ. ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬಂದಿತ್ತು. ನಾನು ಅದನ್ನು ಗೌರವದಿಂದಲೇ ತಿರಸ್ಕರಿಸಿದ್ದೇನೆ. ಈ ಮೊದಲೇ ನಾನು ಕೆಲವು ಕೆಲಸಗಳನ್ನು ಒಪ್ಪಿಕೊಂಡಿದ್ದೇನೆ. ಹೀಗಾಗಿ ಆಫರ್ ತಿರಸ್ಕರಿಸಿದ್ದೇನೆ. ಅವಕಾಶಕ್ಕಾಗಿ ಹಾಗೂ ನನ್ನ ಅಭಿಮಾನಿಗಳ ಬೆಂಬಲಕ್ಕೆ ನಾನು ಸದಾ ಚಿರಋಣಿ ಎಂದು ಜ್ಯೋತಿ ರೈ ತಿಳಿಸಿದ್ದರು.
ಇನ್ನೂ ಕನ್ನಡದ ಗೆಜ್ಜೆ ಪೂಜೆ, ಮೂರು ಗಂಟು, ಬಂದೇ ಬರತಾವ ಕಾಲ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿ ಬಣ್ಣ ಹಚ್ಚಿದ್ದಾರೆ. ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕನ್ನಡದ ಸುಮಾರು 18ಕ್ಕೂ ಹೆಚ್ಚು ಸೀರಿಯಲ್‌ಗಳಲ್ಲಿ ಜ್ಯೋತಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.