ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber Of Commerce) ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿರಿಯ ನಟಿ ಜಯಮಾಲಾ (Jayamala) ಗೆಲುವಿನ ನಗೆ ಬೀರಿದ್ದಾರೆ.
ಈ ಹಿಂದೆ 2008 ರಿಂದ 2010 ರ ವರೆಗೆ ಜಯಮಾಲಾ ಕೆಎಫ್‌ಸಿಸಿ ಅಧ್ಯಕ್ಷೆ ಆಗಿದ್ದರು. ಇದೀಗ 2ನೇ ಬಾರಿಗೆ ಜಯಮಾಲಾ ಅಧ್ಯಕ್ಷೆ ಆಗಿದ್ದಾರೆ. ಇದನ್ನೂ ಓದಿ: ತುಂಡು ಬಟ್ಟೆ ಕೊಟ್ಟು ನಿನ್ನ ಬಾಡಿ ನೋಡ್ಬೇಕು ಅಂದ್ರು – ಕಹಿ ಘಟನೆ ಬಿಚ್ಚಿಟ್ಟ ಐಶ್ವರ್ಯ ರಾಜೇಶ್
ಪದಾಧಿಕಾರಿಗಳು ಯಾರ‍್ಯಾರು?
ಉಪಾಧ್ಯಕ್ಷ, ಖಜಾಂಚಿ ಮುಂತಾದ ಪದಾಧಿಕಾರಿಗಳ ಸ್ಥಾನಗಳಿಗೂ ಚುನಾವಣೆ ನಡೆದಿತ್ತು. ಅದರಂತೆ ಗೌರವ ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಸುಂದರ್ ರಾಜ್ ಗೆದ್ದು ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ರೆ, ಎಕ್ಸಿಬ್ಯೂಟರ್ ವಲಯದಿಂದ ಕಿಶೋರ್, ಡಿಸ್ಟ್ರಿಬ್ಯೂಟರ್ ವಲಯದಿಂದ ಕೆ ಮಂಜು ಉಪಾಧ್ಯಕ್ಷರಾಗಿದ್ದಾರೆ.
ನಿರ್ಮಾಪಕರ ವಲಯದಿಂದ ಎ ಗಣೇಶ್, ಡಿಸ್ಟ್ರಿಬ್ಯೂಟರ್ ವಲಯದಿಂದ ರಮೇಶ್, ಎಕ್ಸಿಬ್ಯೂಟರ್ ವಲಯದಿಂದ ಅಶೋಕ್ ಕಾರ್ಯದರ್ಶಿ ಸ್ಥಾನಗಳಿಗೆ ಚುನಾಯಿತರಾಗಿದ್ದಾರೆ. ಇನ್ನೂ ನಟ ಜಯಸಿಂಹ ಮುಸುರಿ ಖಜಾಂಚಿಯಾಗಿ ಆಯ್ಕೆ ಆಗಿದ್ದಾರೆ. 2024 – 25ನೇ ಸಾಲಿನ ಚುನಾವಣೆಯಲ್ಲಿ ಎಂ. ನರಸಿಂಹಲು ಗೆದ್ದು ಅಧ್ಯಕ್ಷರಾಗಿದ್ದರು. ಇದೀಗ ಹಿರಿಯ ನಟಿ ಜಯಮಾಲಾ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇದನ್ನೂ ಓದಿ: ನಟ ಯಶ್ ತಾಯಿ ಹಾಸನ ಸೈಟ್ ಜಟಾಪಟಿ – ಕಾಂಪೌಂಡ್ ಕೆಡವಿದ್ದ ಮಾಲೀಕನ ಜೊತೆ ವಾಗ್ವಾದ
ಭರ್ಜರಿ ಮತ ಬೇಟೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕಾಗಿ ಜಯಮಾಲಾ ಹಾಗೂ ನಿರ್ಮಾಪಕ ಭಾ.ಮಾ ಹರೀಶ್ ಸ್ಪರ್ಧಿಸಿದ್ದರು. ಇಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಬಾರಿಯ ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಒಟ್ಟು 843 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 512 ವೋಟ್‌ಗಳು ಜಯಮಾಲಾ ಪರವಾಗಿ ಬಿದ್ದಿವೆ. ಭರ್ಜರಿ ಮತಗಳನ್ನ ಪಡೆದು ಜಯಮಾಲಾ ಜಯಭೇರಿ ಬಾರಿಸಿದ್ದಾರೆ. ನಿರ್ಮಾಪಕ ಭಾ ಮಾ ಹರೀಶ್ ಸೋಲು ಅನುಭವಿಸಿದ್ದಾರೆ. ಇದನ್ನೂ ಓದಿ: ಸಿನಿ ರಂಗದೊಂದಿಗೆ ಸಿಜೆ ರಾಯ್ ನಂಟು ಅಪಾರ – ಕನ್ನಡ, ಮಲಯಾಳಂ ನಲ್ಲಿ 11 ಸಿನಿಮಾ ನಿರ್ಮಾಣ



