Connect with us

Bengaluru City

ಪೊಗರು ಸಿನ್ಮಾದಲ್ಲಿ ಧ್ರುವ ಪಕ್ಕ ನಿಲ್ತಾರೆ ಕನ್ನಡದ ಹುಡುಗಿ

Published

on

Share this

ಬೆಂಗಳೂರು: ಏಳು ವರ್ಷಗಳಲ್ಲಿ ನಟ ಧ್ರುವ ಸರ್ಜಾ ಮಾಡಿದ್ದು ಮೂರು ಸಿನಿಮಾ. ಆದರೆ ಐವತ್ತು ಸಿನಿಮಾ ಮಾಡಿದಷ್ಟು ಹೆಸರು ಗಳಿಸಿದ್ದಾರೆ. ಅದ್ದೂರಿ, ಬಹಾದ್ದೂರ್ ಮತ್ತು ಭರ್ಜರಿ ಈ ಮೂರು ಸಿನಿಮಾಗಳು ಗೆದ್ದ ಹೊಡೆತಕ್ಕೆ ಹ್ಯಾಟ್ರಿಕ್ ಪ್ರಿನ್ಸ್ ಆಗಿಬಿಟ್ಟರು.

ಮೂರು ಸಿನಿಮಾಗಳ ಗೆಲುವು ಧ್ರುವ ಹೆಗಲ ಮೇಲೆ ಇನ್ನಷ್ಟು ದೊಡ್ಡ ಜವಾಬ್ದಾರಿ, ನಿರೀಕ್ಷೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಎಲ್ಲವನ್ನೂ ಅಳೆದು ತೂಗಿ ಧ್ರುವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇವರ ಅಭಿನಯದ ನಾಲ್ಕನೇ ಸಿನಿಮಾ `ಪೊಗರು’ ಶೂಟಿಂಗ್ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದೆ. ಆದರೆ ಈ ಸಿನಿಮಾದ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಗಳಿವೆ. ಆದರೆ ಧ್ರುವ ಜೊತೆ ಕನ್ನಡ ನಟಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪರಭಾಷೆ ಹೀರೊಯಿನ್ ಗಳಿಗೆ ಮಣೆ ಹಾಕುವ ಬದಲು ಕನ್ನಡ ಹುಡುಗಿಯರಿಗೇ ಚಾನ್ಸ್ ಕೊಡಲು ಧ್ರುವ ಅಂಡ್ ಟೀಮ್ ನಿರ್ಧರಿಸಿದೆ. ಹೊಸ ನಾಯಕಿಯ ಜಾಗದಲ್ಲಿ ಕನ್ನಡತಿಯರಾದ ಕಿರಿಕ್ ಪಾರ್ಟಿಯ ಲಕ್ಕಿ ಗರ್ಲ್ ರಶ್ಮಿಕಾ ಮಂದಣ್ಣ ಅಥವಾ ಅತಿರಥ ಸಿನಿಮಾದ ನಾಯಕಿ ಲತಾ ಹೆಗಡೆ ನಿಲ್ಲಲಿದ್ದಾರೆ. ಆದರೆ ಈ ಬಗ್ಗೆ ಸಿನಿಮಾ ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ.

ಶೃತಿ ಹಾಸನ್ ಔಟ್: ಈ ಹಿಂದೆಯೆ ಪೊಗರು ಸಿನಿಮಾಗಾಗಿ ಬಾಲಿವುಡ್ ನಟಿ, ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಅವರನ್ನು ಅಪ್ರೋಚ್ ಮಾಡಲಾಗಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಕುರಿತು ನಟಿ ಶೃತಿ ಹಾಸನ್, ನಾನು ಯಾವುದೇ ಕನ್ನಡ ಚಿತ್ರದಲ್ಲಿ ನಟಿಸುತ್ತಿಲ್ಲ. ಕನ್ನಡದ ಯಾವುದೇ ನಿರ್ದೇಶಕ, ನಿರ್ಮಾಪಕರೂ ನನ್ನನ್ನು ಅಪ್ರೋಚ್ ಮಾಡಿಲ್ಲ. ಕನ್ನಡದಲ್ಲಿ ನಟಿಸಲು ಆಫರ್ ಬಂದಿಲ್ಲ, ಒಂದು ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತ ಕನ್ನಡದಲ್ಲಿ ನಟಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ಪೊಗರು ಸಿನಿಮಾ ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬರಲಿದೆ. ಸಿನಿಮಾ ಅಪ್ಪಟ ಸ್ವಮೇಕ್ ಕಥೆಯನ್ನು ಒಳಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ. ಇನ್ನೂ ಭರ್ಜರಿ ಸಿನಿಮಾ 50 ದಿನಗಳನ್ನೂ ಪೂರೈಸಿ ಮುನ್ನುಗುತ್ತಿದೆ. ಇತ್ತೀಚೆಗೆ ಚಿತ್ರತಂಡದ 50ನೇ ದಿನಗಳ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದೆ.

 

Click to comment

Leave a Reply

Your email address will not be published. Required fields are marked *

Advertisement