ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಫ್ರಾನ್ಸ್‌ನಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್‌ಗೆ (Cannes Festival 2025) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಅತೀ ದೊಡ್ಡ ಚಲನಚಿತ್ರೋತ್ಸವಕ್ಕೆ ದೇಶ ವಿದೇಶದ ನಟ-ನಟಿಯರು ಭಾಗಿಯಾಗುತ್ತಾರೆ. ಇದೀಗ ಈ ಚಲನಚಿತ್ರೋತ್ಸವದಲ್ಲಿ ಕನ್ನಡ ಕಿರುತೆರೆ ನಟಿ ದಿಶಾ ಮದನ್ ಕೂಡ ಭಾಗಿಯಾಗಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡತಿ ದಿಶಾ ಮದನ್‌ಗೆ ಕಾನ್ ಫಿಲ್ಮ್ ಫೆಸ್ಟಿವಲ್ ಆಹ್ವಾನ

 
View this post on Instagram
 
ಅದಷ್ಟೇ ಅಲ್ಲ, 2017ರಲ್ಲಿ ತಮ್ಮ ಮದುವೆಯಲ್ಲಿ ಧರಿಸಿದ ಸೀರೆಯನ್ನು ಈ ಕಾರ್ಯಕ್ರಮದಲ್ಲೂ ನಟಿ ತೊಟ್ಟಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿ, ನನ್ನ ಮದುವೆಯ ಸೀರೆಗಳಲ್ಲಿ ಇದು ಕೂಡ ಒಂದಾಗಿದೆ. ಇದು ಕೇವಲ ಫ್ಯಾಷನ್ ಅಲ್ಲ. ಅದಕ್ಕೂ ಹೆಚ್ಚಾಗಿ ಒಂದು ಆಳವಾದ ಎಮೋಷನ್ಸ್ ಇದೆ ಎಂದು ದಿಶಾ ಬರೆದುಕೊಂಡಿದ್ದಾರೆ.
 
View this post on Instagram
 
ಈ ಚಲನಚಿತ್ರೋತ್ಸವ ಮೇ 13ರಿಂದ 24ರವರೆಗೆ ಇದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ಕನ್ನಡತಿ ದಿಶಾಗೆ ಈ ಸಿನಿಮಾ ಹಬ್ಬಕ್ಕೆ ಬರಲು ಬಂಪರ್ ಅವಕಾಶ ಸಿಕ್ಕಿದೆ. ಆಹ್ವಾನ ಪತ್ರ ನೀಡಲಾಗಿದೆ. ಈ ಬಗ್ಗೆ ನಟಿ ವಿಡಿಯೋ ಮೂಲಕ ತಿಳಿಸಿದ್ದರು.

ಪ್ರಸ್ತುತ ನಟಿ ದಿಶಾ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಭಾವನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮನೋಜ್ಞ ನಟನೆಯಿಂದ ಮನೆ ಮಾತಾಗಿದ್ದಾರೆ.
 
					

 
		 
		 
		 
		 
		 
		 
		 
		 
		