ಬಾಲಿವುಡ್ ಸ್ಟಾರ್ ದಂಪತಿ ರಣ್‌ವೀರ್ ಸಿಂಗ್- ದೀಪಿಕಾ ಪಡುಕೋಣೆ (Deepika Padukone) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದೀಪ್‌ವೀರ್ ದಂಪತಿ ಮೊದಲ ಮಗುವಿನ (Child) ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ತಾಯಿಯಾಗಿದ್ದಾರೆ.
ವರುಣ್ ಧವನ್ ದಂಪತಿ, ಅನುಷ್ಕಾ- ವಿರಾಟ್ ಜೋಡಿ ಸಿಹಿಸುದ್ದಿ ಕೊಡ್ತಿದ್ದಂತೆ ದೀಪಿಕಾ ಮತ್ತು ರಣ್‌ವೀರ್ (Ranveer Singh) ಜೋಡಿ ಮನೆಗೆ ಮೊದಲ ಅತಿಥಿ ಆಗಮನ ಆಗುತ್ತಿರುವ ಸಂತಸದಲ್ಲಿದ್ದಾರೆ. ದೀಪಿಕಾ ಈಗ 2 ತಿಂಗಳ ಗರ್ಭಿಣಿ ಎನ್ನಲಾಗಿದೆ. ಅಷ್ಟಕ್ಕೂ ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ. ದೀಪಿಕಾ ಕುಟುಂಬ ಈ ಸುದ್ದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿಕೃತವಾಗಿ ಅನೌನ್ಸ್ ಕೂಡ ಮಾಡಿಲ್ಲ. ಈ ಸುದ್ದಿ ನಿಜನಾ ಕಾದುನೋಡಬೇಕಿದೆ.
‘ದಿ ವೈಟ್ ಲೋಟಸ್ ಸೀಸನ್ 3’ ಕಾರ್ಯಕ್ರಮಕ್ಕೆ ದೀಪಿಕಾ ಭಾಗಯಾಗಬೇಕಿತ್ತು. ಸಡನ್ ಆಗಿ ಕಾರ್ಯಕ್ರಮಕ್ಕೆ ಬರದೇ ಹೊರಗುಳಿದಿದ್ದಾರೆ. ಪ್ರೆಗ್ನೆನ್ಸಿ ಕಾರಣದಿಂದಲೇ ಕಾರ್ಯಕ್ರಮಕ್ಕೆ ನಟಿ ಗೈರಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಬಡೇ ಮಿಯಾನ್ ಚೋಟೆ ಮಿಯಾನ್’ ಟೈಟಲ್ ಟ್ರ‍್ಯಾಕ್ ಔಟ್
2018ರಲ್ಲಿ ರಣ್‌ವೀರ್, ದೀಪಿಕಾ ಜೋಡಿ ಮದುವೆಯಾದರು. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಮದುವೆಯಾದರು.
ದೀಪಿಕಾ ಪಡುಕೋಣೆ ಅವರು ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದಲ್ಲಿ ನಟಿಸಿದ ಬಳಿಕ ಬಾಲಿವುಡ್‌ಗೆ (Bollywood) ಲಗ್ಗೆ ಇಟ್ಟರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ನಂತರ ಹಿಂದಿ ಸಿನಿಮಾರಂಗ ಬೆಂಗಳೂರು ಬೆಡಗಿಯ ಕೈಹಿಡಿಯಿತು. ಇತ್ತೀಚಿನ ‘ಪಠಾಣ್’ ಚಿತ್ರದ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ.