ಕನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath) ಅವರು ಸಿನಿಮಾ ಕೆಲಸಕ್ಕೆ ಬ್ರೇಕ್ ಸಿಕ್ಕ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ (Tirumala Temple) ದರ್ಶನ ಪಡೆದಿದ್ದಾರೆ. ತಿಮ್ಮಪ್ಪನಿಗೆ ನಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಬಹುನಿರೀಕ್ಷಿತ ‘ಹೌಸ್‌ಫುಲ್ 5’ ಚಿತ್ರದ ಟೀಸರ್ ಔಟ್
ಅಕ್ಕ ಅನುಷಾ ಮತ್ತು ಭಾವನೊಂದಿಗೆ ಆಂಧ್ರಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಆಶಿಕಾ ಭೇಟಿ ನೀಡಿದ್ದಾರೆ. ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿ ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಈ ವೇಳೆ, ಬಹುಭಾಷಾ ನಟಿ ಆಶಿಕಾ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ಬಿಜೆಪಿ ಮುಖಂಡನ ಮಗನ ಮದುವೆಯಲ್ಲಿ ಜಾಕ್ವೆಲಿನ್ ಡ್ಯಾನ್ಸ್- ನೆಟ್ಟಿಗರಿಂದ ಟೀಕೆ
View this post on Instagram
ಕಳೆದ ವಾರ ಗೆಳತಿ ಅರ್ಚನಾ ಕೊಟ್ಟಿಗೆ ಮತ್ತು ಕ್ರಿಕೆಟರ್ ಶರತ್ ಮದುವೆಯಲ್ಲಿ ಮಿಂಚಿದ್ದರು. ದಿಯಾ ಖ್ಯಾತಿಯ ಖುಷಿ, ತೇಜಸ್ವಿ ಶರ್ಮಾ, ಸಿರಿ ಪ್ರಹ್ಲಾದ್ ಸೇರಿದಂತೆ ಅನೇಕರು ಅರ್ಚನಾ ಮದುವೆಯಲ್ಲಿ ಭಾಗಿಯಾಗಿದ್ದರು.
ಸದ್ಯ ಕಾರ್ತಿ ನಟನೆಯ ‘ಸರ್ದಾರ್ 2’, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’, ಕನ್ನಡದ ‘ಗತವೈಭವ’ ಸೇರಿದಂತೆ ಹಲವು ಚಿತ್ರಗಳು ಆಶಿಕಾ ಕೈಯಲ್ಲಿವೆ.