– ‘ರ’ ಹೆಸರಿನ ನಟಿಯರು ಫೇಮಸ್ ಆಗಿದ್ದಾರೆ ಅಂತ ಹೆಸರು ಬದಲಾಯಿಸಿಕೊಂಡಿರೋ ನಟಿ
– ಇದು ಅತಿದೊಡ್ಡ ಚಿನ್ನದ ಬೇಟೆ ಎಂದ ಡಿಆರ್‌ಐ ಅಧಿಕಾರಿಗಳು
ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್‌ನಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ (Ranya Rao) ಪ್ರಕರಣ ಕುರಿತು ಡಿಆರ್‌ಐ ಅಧಿಕಾರಿಗಳು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
Advertisement
ಪ್ರಕರಣ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅಧಿಕಾರಿಗಳು, ಇದೇ ಅತಿ ದೊಡ್ಡ ಭೇಟೆ ಎಂದು ತಿಳಿಸಿದ್ದಾರೆ. ಒಟ್ಟು 17.29 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಏರ್‌ಪೋರ್ಟ್ನಲ್ಲಿ 12.56 ಕೋಟಿ ಮೌಲ್ಯದ 14.2 ಕೆಜಿ ಚಿನ್ನ, ಮನೆಯಲ್ಲಿ 2.06 ಕೋಟಿ ಮೌಲ್ಯದ ಚಿನ್ನ, ಬೆಂಗಳೂರಿನ ಮನೆಯಲ್ಲಿ 2.67 ಕೋಟಿ ನಗದು ಹಣ ಸಿಕ್ಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ‘ಮಾಣಿಕ್ಯ’ ಸಿನಿಮಾ ನಟಿ ರನ್ಯಾ ರಾವ್ ಫ್ಲಾಟ್ ಮೇಲೆ ದಾಳಿ – ಕೋಟಿ ಕೋಟಿ ಮೌಲ್ಯದ ಚಿನ್ನ ವಶ
Advertisement
Advertisement
ದುಬೈನಿಂದ ಬೆಂಗಳೂರಿನ ಏಪ್‌ಪೋರ್ಟ್‌ಗೆ ನಟಿ ಬಂದಿದ್ದರು. 1 ಕೆಜಿ ತೂಗುವ 14 ಗೋಲ್ಡ್ ಬಿಸ್ಕೆಟ್ ತಂದಿದ್ದರು. ತೊಡೆಯ ಭಾಗಕ್ಕೆ 14 ಬಿಸ್ಕೆಟ್‌ಗಳನ್ನು ಗಮ್ ಹಾಕಿ ಅಂಟಿಸಿಕೊಂಡಿದ್ದರು. ಬಳಿಕ ಟೇಪ್ ಅನ್ನು ಬಲವಾಗಿ ಸುತ್ತಿಕೊಂಡಿದ್ದರು. ಟೇಪ್ ಮೇಲೆ ಕ್ರೆಪೆ ಬ್ಯಾಂಡೇಜ್ ಸುತ್ತಿಕೊಂಡಿದ್ದರು. ಯಾವುದೇ ಸ್ಕ್ಯಾನರ್ ಅಲ್ಲಿ ಅನುಮಾನ ಬಾರದಂತೆ ಕ್ರೆಪೆ ಬ್ಯಾಂಡೇಜ್ ಹಾಕಿಕೊಂಡಿದ್ದರು. ಇದೆಲ್ಲಾ ಮಾಹಿತಿ ತಿಳಿದಿದ್ದ ಡಿಆರ್‌ಐ ಕಾರ್ಯಾಚರಣೆ ನಡೆಸಿತು ಎಂದು ತಿಳಿಸಿದ್ದಾರೆ.
Advertisement
ಸ್ಯಾಂಡಲ್‌ವುಡ್‌ನಲ್ಲಿ ಕ್ಲಿಕ್ ಆಗ್ಬೇಕು ಅಂದ್ರೆ ಒಳ್ಳೆಯ ಹೆಸರು ಇರಬೇಕು. ಒಳ್ಳೆಯ ಹೆಸರು ಬರಬೇಕು ಅಂದ್ರೆ ‘ರ’ ಅಕ್ಷರವೇ ಆಗಿರಬೇಕು ಎಂದು ತನ್ನ ಹೆಸರನ್ನೇ ಬದಲಿಸಿಕೊಂಡಿದ್ದಾರೆ. ರನ್ಯಾ ಮೂಲ ಹೆಸರು ಹರ್ಷವರ್ದಿನಿ ಯಜ್ಞೇಶ್. ಮಾಣಿಕ್ಯ ಚಿತ್ರಕ್ಕೆ ಬರೋದಕ್ಕಾಗಿ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದರು. ‘ರ’ ಪದದಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರೆ ಒಳ್ಳೆ ಹೆಸರು ಬರುತ್ತೆ. ಈಗಾಗಲೇ `ರ’ ಹೆಸರಿನ ನಟಿಯರು ತುಂಬಾ ಒಳ್ಳೆಯ ಹೆಸರು ಮಾಡಿದ್ದಾರೆ ಎಂದುಕೊಂಡಿದ್ದರು. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿ ರನ್ಯಾ ರಾವ್‌ಗೆ 14 ದಿನ ನ್ಯಾಯಾಂಗ ಬಂಧನ