Bengaluru CityCinemaKarnatakaLatestMain PostSandalwood

ರಾಜಕೀಯಕ್ಕೆ ಎಂಟ್ರಿ ಕೊಟ್ಟ `ಅಧ್ಯಕ್ಷ’ ನಟಿ ಆರೋಹಿತ

ಸ್ಯಾಂಡಲ್‌ವುಡ್ ನಟಿ ಆರೋಹಿತ (Aarohitha) ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಮ್ ಆದ್ಮಿ ಪಾರ್ಟಿಗೆ (AAP) ಬುಧವಾರ ನಟಿ ಆರೋಹಿತ ಸೇರ್ಪಡೆಯಾಗಿದ್ದಾರೆ. ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ನಟಿ ಆರೋಹಿತರನ್ನ ಸ್ವಾಗತಿಸಿದ್ದಾರೆ. ಇನ್ನು ಈ ವೇಳೆ ನಟಿ ವಸಂತನಗರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಬಯಕೆ ಅನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡದ ಆಟಗಾರ, ಕಿರಿಕ್ ಪಾರ್ಟಿ, ಗೌಡ್ರು ಹೋಟೆಲ್, ಜಗ್ಗಿ, ಅಧ್ಯಕ್ಷ, ಆಯುಷ್ಮಾನ್‌ಭವ ಸಿನಿಮಾಗಳಲ್ಲಿ ನಟಿ ಆರೋಹಿತ ಬಣ್ಣ ಹಚ್ಚಿದ್ದಾರೆ. ಬೆಂಗಳೂರಿನ ವಸಂತನಗರದ ನಿವಾಸಿಯಾಗಿರುವ ಆರೋಹಿತ ಅಲಿಯಾಸ್ ಪ್ರಿಯಾಂಕ ಬಿ.ಕಾಂ ಪದವೀಧರೆಯಾಗಿದ್ದು, ತಮ್ಮ ವ್ಯಾಸಂಗದ ನಂತರ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸಾಕಷ್ಟು ಸಿನಿಮಾಗಳಲ್ಲಿ ಛಾಪೂ ಮೂಡಿಸಿದ್ದ ಈ ನಟಿ ಇದೀಗ ರಾಜಕೀಯ ಕ್ಷೇತ್ರದಲ್ಲಿ ಜನಸೇವೆ ಮಾಡಲು ರೆಡಿಯಾಗಿದ್ದಾರೆ. ಆಮ್ ಆದ್ಮಿ ಪಾರ್ಟಿಗೆ ಆರೋಹಿತ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ:‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

ಈ ವೇಳೆ ಎಎಪಿ ಪಕ್ಷದ ಬಗ್ಗೆ ನಟಿ ಆರೋಹಿತ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಹಾಗೂ ದೇಶದೆಲ್ಲೆಡೆ ಬದಲಾವಣೆ ಸಾಧ್ಯವಾಗಬೇಕಾದರೆ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯು ಸರ್ಕಾರಿ ಶಾಲೆಗಳಲ್ಲಿ ಅದ್ಭುತ ಬದಲಾವಣೆ ತಂದಿದೆ. ಸ್ವಚ್ಛ ಹಾಗೂ ಗುಣಮಟ್ಟದ ಆಡಳಿತದಿಂದ ಮಾತ್ರ ಇದು ಸಾಧ್ಯ. ಕರ್ನಾಟಕದಲ್ಲೂ ಅಂತಹ ಆಡಳಿತ ಬರಬೇಕು ಎಂಬ ಉದ್ದೇಶದಿಂದ ಎಎಪಿ ಪಕ್ಷಕ್ಕೆ ನಾನು ಸೇರಿದ್ದೇನೆ ಎಂದು ಆರೋಹಿತ ಹೇಳಿದರು.

ಇನ್ನೂ ಚಂದನವನದ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟಿ ಆರೋಹಿತ, ಇದೀಗ ರಾಜಕೀಯ ರಂಗದಲ್ಲಿ ಛಾಪೂ ಮೂಡಿಸಲು ರೆಡಿಯಾಗಿದ್ದಾರೆ.

Live Tv

Leave a Reply

Your email address will not be published.

Back to top button