ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯರಾಗಿರುವ ಅನುಪಮಾ ಗೌಡ ದುಬಾರಿ ಮೊತ್ತದ ಕಾರನ್ನ ಖರೀದಿಸಿದ್ದಾರೆ. ಕಾರಿನ ಹಿಂದಿನ ಕಥೆಯನ್ನ ಅಭಿಮಾನಿಗಳೊಂದಿಗೆ ನಟಿ ಅನುಪಮಾ ಗೌಡ ಹಂಚಿಕೊಂಡಿದ್ದಾರೆ.
ನಟಿ, ನಿರೂಪಕಿಯಾಗಿ ಚಂದನವನದಲ್ಲಿ ಛಾಪೂ ಮೂಡಿಸಿದವರು ಅನುಪಮಾ ಗೌಡ, ಇದೀಗ 17 ಲಕ್ಷದ ಮಹೀಂದ್ರಾ ಥಾರ್ ಖರೀದಿಸಿದ್ದಾರೆ. ನಟಿ ಖರೀದಿಸಿರುವ ಮೂರನೇ ಕಾರು ಇದಾಗಿದ್ದು, ಕಾರು ಕೊಂಡಿರುವ ತೆರೆಹಿಂದಿನ ಕಥೆಯನ್ನ ಅನುಪಮಾ ಗೌಡ ಬಿಚ್ಚಿಟ್ಟಿದ್ದಾರೆ. ಪ್ರತಿಯೊಬ್ಬರು ಕನಸುಗಳನ್ನ ಕಾಣಬೇಕು ಅದನ್ನ ನನಸು ಮಾಡಿಕೊಳ್ಳಲು ಶ್ರಮವಿರಬೇಕು ಎಂದು ಸ್ಪೂರ್ತಿಯ ಮಾತುಗಳನ್ನ ಅನುಪಮಾ ಮಾತನಾಡಿದ್ದಾರೆ.
ನನ್ನ ಜೀವನದಲ್ಲಿ ನಾನು ಮೊದಲು ಕಾರ್ ಖರೀದಿ ಮಾಡಿದ್ದು 2014 ಆಗಸ್ಟ್ 16 ಹುಂಡೈ ಐ10 ಕಾರು, ಶೂಟಿಂಗ್ ದಿನ ಬೆಳಗ್ಗೆ ಬೇಗ ಪಿಕಪ್ ಮಾಡುತ್ತಿದ್ದರು ಆ ಮೇಲೆ ರಾತ್ರಿ ತಡವಾಗಿ ಮನೆ ಬರುತ್ತಿದ್ದೆ, ಆ ಸಮಯದಲ್ಲಿ ತುಂಬಾ ಟೈಮ್ ವೇಸ್ಟ್ ಆಗುತ್ತಿತ್ತು. ಈ ಕಾರಣದಿಂದ ನಾನು ಕಾರು ಖರೀದಿಸಿದೆ. ನಾಲ್ಕು ವರ್ಷ ಆ ಕಾರನ್ನು ಬಳಸಿದೆ. ನೇರವಾಗಿ ಹೋಗುವುದು ವಾಪಸ್ ಬರುವುದಷ್ಟೇ ನನಗೆ ಬರುತ್ತಿತ್ತು. ನನಗೆ ಸರಿಯಾಗಿ ಕಾರು ಓಡಿಸಲು ಬರುತ್ತಿರಲಿಲ್ಲ ಮೊದಲ ಕಾರು ಎಲ್ಲವನ್ನು ಕಲಿಸಿತ್ತು. ಬಿಗ್ ಬಾಸ್ ಮುಗಿಸಿಕೊಂಡು ನಾನು ಹೊರ ಬಂದ ನಂತರ ನಾನು ಕ್ರೇಟಾ ಬುಕ್ ಮಾಡಿದೆ. ಕಾರು ಬರುವುದು ತುಂಬಾ ತಡವಾಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ನನ್ನ ತಂದೆ ತೀರಿಕೊಂಡಿದ್ದರು ಅಕ್ಟೋಬರ್‌ನಲ್ಲಿ ಕಾರು ಬಂತು. ಅವರಿಗೆ ಕಾರು ಬೇಡ ಅಂತ ಹೇಳಿದೆ ಆದರೆ ಲೋನ್ ಪ್ರೋಸಿಜರ್ ಆಗಿ ಒಂದು ಸಲ ಇಎಂಐ ಕೂಡ ಕಟ್ ಆಗಿತ್ತು ಈ ಕಾರಣಕ್ಕೆ ಇಷ್ಟವಿಲ್ಲದಿದ್ದರೂ ಕಾರು ಖರೀದಿ ಮಾಡಬೇಕಾಯಿತು ಅನುಪಮಾ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ
ಬಳಿಕ ನನ್ನ ಐ10 ಕಾರ್‌ನ ನನ್ನ ಸ್ನೇಹಿತನಿಗೆ ಕೊಟ್ಟೆ. ಮೊದಲನೇ ಕಾರು ಎಮೋಷನ್ ಇದ್ದ ಕಾರಣ ಸ್ನೇಹಿತನಿಗೆ ಕೊಟ್ಟರೆ ಯಾವಾಗ ಬೇಕಿದ್ದರೂ ನೋಡಬಹುದು ಅಂತ. ಈ ಕಾರಿಗೆ ನಾಲ್ಕು ವರ್ಷ ಆಯ್ತು ನನ್ನ ಬಜೆಟ್‌ಗೆ ಬೇರೆ ಯಾವ ಕಾರು ಸಿಕ್ಕಿರಲಿಲ್ಲ. ಒಂದು ದಿನ ರೋಡಲ್ಲಿ ಸಖತ್ ಆಗಿರುವ ಕಾರು ನೋಡಿದೆ, ಕಂಪನಿಗೆ ಕರೆ ಮಾಡಿ ಟೆಸ್ಟ್ ಡ್ರೈವ್ ಮಾಡಿದೆ. ಇಷ್ಟವಾಯಿತು ಬಳಿಕ ಬುಕ್ ಮಾಡಿದೆ ಎಂದು ನಟಿ ಹೇಳಿದ್ದಾರೆ. ನನ್ನ ಕೈಯಲ್ಲಿ ಮಾಡಲು ಆಗುತ್ತೆ ಅಂದ್ರೆ ಎಲ್ಲರ ಕೈಯಲ್ಲೂ ಮಾಡಲು ಆಗುತ್ತೆ. ಜೀರೋಯಿಂದ ನನ್ನ ಕೆರಿಯರ್‌ನ ನಾನು ಶುರು ಮಾಡಿದ್ದೇನೆ. ಇದು ನನ್ನ ಮೂರನೇ ಕಾರ್ ಆಗಿರೋದರಿಂದ ನಾನು ಮೊದಲನೇ ಸಲ ಮಾತನಾಡುತ್ತಿದ್ದೇನೆ. ಜೀವನದಲ್ಲಿ ಒಂದಿಷ್ಟು ಡ್ರೀಮ್‌ಗಳನ್ನು ಇಟ್ಟುಕೊಳ್ಳಿ ಸಾಧನೆ ಮಾಡೇ ಮಾಡುತ್ತೀರಾ. ಕಾರು ತೆಗೆದುಕೊಳ್ಳುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು ತೆಗೆದುಕೊಂಡ ನಂತರ ಪ್ರತಿ ತಿಂಗಳು ಇಎಂಐ ಕಟ್ಟುವುದು ತುಂಬಾನೇ ಇಷ್ಟ. ಜೀವನದಲ್ಲಿ ಎಲ್ಲರೂ ಮೊದಲು ಸೇವಿಂಗ್ಸ್ ಮಾಡಿ. ಸಾಯುವಷ್ಟರಲ್ಲಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದಿದ್ದಾರೆ. ತನ್ನ ಕಥೆಯನ್ನ ಹೇಳುವ ಮೂಲಕ ಅಭಿಮಾನಿಗಳಿಗೆ, ನಟಿ ಸ್ಪೂರ್ತಿಯ ಮಾತುಗಳನ್ನ ಆಡಿದ್ದಾರೆ.