ಕನ್ನಡದ ಸ್ಟಾರ್ ನಟ ಉಪೇಂದ್ರ (Upendra) ಮತ್ತೆ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ‘ಪುಷ್ಪ 2’ (Pushpa 2) ಸಿನಿಮಾ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ರಾಮ್ ಪೋತಿನೇನಿ ಸಿನಿಮಾದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ಪಾತ್ರದ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಇದನ್ನೂ ಓದಿ:‘ಡ್ರ್ಯಾಗನ್’ ಹೀರೋಗೆ ಜೊತೆಯಾದ ಕೃತಿ ಶೆಟ್ಟಿ- ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ಅಪ್‌ಡೇಟ್
ರಾಮ್ ಪೋತಿನೇನಿ ನಟನೆಯ 22ನೇ ಸಿನಿಮಾದಲ್ಲಿ ಉಪೇಂದ್ರ ಅವರು ಸೂರ್ಯ ಕುಮಾರ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಅವರ ಪಾತ್ರದ ಲುಕ್ ಸಖತ್ ಸ್ಟೈಲೀಶ್ ಆಗಿದೆ. ಶರ್ಟ್ ಮೇಲೆ ಜಾಕೆಟ್ ಹಾಕಿದ್ದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ. ಅವರ ಬೆನ್ನ ಹಿಂದೆ ಕೂಡ ಲೈಟ್ ಮತ್ತು ಕ್ಯಾಮೆರಾ ಆನ್ ಆಗಿದೆ. ಹೀಗಾಗಿ ಚಿತ್ರದಲ್ಲಿಯೂ ಕೂಡ ಅವರು ಸೂಪರ್ ಸ್ಟಾರ್ ಪಾತ್ರ ಮಾಡ್ತಿರಬಹುದಾ ಎಂದು ಫ್ಯಾನ್ಸ್ ಊಹಿಸಿದ್ದಾರೆ.
Team #RAPO22 welcomes the brilliant @nimmaupendra Garu on board 🌟
‘SURYA KUMAR’ will be a role that will be memorable for every cinema fan ❤️🔥#RAPO22TitleGlimpse drops on May 15th 💥@ramsayz #BhagyashriBorse @filmymahesh @MythriOfficial @iamviveksiva @mervinjsolomon… pic.twitter.com/HC9q0jmNGN
— Mythri Movie Makers (@MythriOfficial) May 12, 2025
ಉಪೇಂದ್ರ ಪಾತ್ರದ ಗ್ಲಿಂಪ್ಸ್ ಅನ್ನು ಮೇ 15ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಈ ಹಿಂದೆ ಅನುಷ್ಕಾ ಶೆಟ್ಟಿ ನಟಿಸಿದ್ದ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ನಿರ್ದೇಶನ ಮಾಡಿದ್ದ ಮಹೇಶ್ ಬಾಬು ಪಿ ಅವರು ಈಗ ರಾಮ್ ಪೋತಿನೇನಿ ಚಿತ್ರಕ್ಕೂ ನಿರ್ದೇಶನ ಮಾಡ್ತಿದ್ದಾರೆ. ಇದನ್ನೂ ಓದಿ:ಶಾರುಖ್ ಖಾನ್ ‘ಕಿಂಗ್’ ಸಿನಿಮಾದಲ್ಲಿ ಅನಿಲ್ ಕಪೂರ್
Presenting you all ‘SURYA KUMAR’ from #RAPO22. My next Telugu Film ❤️🔥
Can’t wait to be on sets with my brother @ramsayz and our director @filmymahesh
The exciting #RAPO22TitleGlimpse drops on May 15th 💥#BhagyashriBorse @MythriOfficial @iamviveksiva @mervinjsolomon… pic.twitter.com/hswCTk2iQk
— Upendra (@nimmaupendra) May 13, 2025
ಉಪೇಂದ್ರ ಈಗಾಗಲೇ ಸೌತ್ ಸಿನಿಮಾಗಳಲ್ಲಿ ಕೆಲಸ ಮಾಡಿ ಪಳಗಿದ್ದಾರೆ. ಈ ಹಿಂದೆ ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ‘ಯುಐ’ ಚಿತ್ರ ಕೂಡ ತೆಲುಗು ವರ್ಷನ್‌ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಗಳಿಸಿತ್ತು. ಅದಷ್ಟೇ ಅಲ್ಲ, ತಮಿಳಿನ ಸ್ಟಾರ್ ತಲೈವಾ ಜೊತೆ ‘ಕೂಲಿ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಉಪೇಂದ್ರ. ಹಾಗಾಗಿ ತೆಲುಗು, ತಮಿಳು ಎರಡು ಭಾಷೆಯಲ್ಲೂ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ.