ನಿನಾದ್, ಪ್ರಿಯಾಂಕಾರ ‘ಆಸೆ’ ಮೆಚ್ಚಿದ ನಟ ರಮೇಶ್ ಅರವಿಂದ್

Public TV
2 Min Read
ramesh aravind

ತ್ತೀಚೆಗಷ್ಟೇ ಕಿರುತೆರೆ ಲೋಕಕ್ಕೆ ಸೇರ್ಪಡೆಯಾಗಿರುವ ‘ಆಸೆ’ (Ase Serial) ಧಾರಾವಾಹಿಯು ತನ್ನ ವಿನೂತನ ಕಥಾ ಹಂದರದಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೊಂದು ಸಾಮಾನ್ಯ ಜನರ ಅಸಮಾನ್ಯ ಕಥೆಯಾಗಿದೆ. ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ರವರು ತುಂಬಾ ಇಷ್ಟ ಪಡುತ್ತಿರುವ ಕಥೆ ಇದಾಗಿದ್ದು, ಆಸೆ ಸೀರಿಯಲ್‌ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ninaad 1‘ಆಸೆ’ ಎಂಬ ಹೊಸ ಸೀರಿಯಲ್ ಸದ್ಯ ಕಿರುತೆರೆ ಲೋಕದಲ್ಲಿ ಮೋಡಿ ಮಾಡುತ್ತಿದೆ. ಹೀರೋ ಸೂರ್ಯ ಪಾತ್ರದಲ್ಲಿ ‘ನಾಗಿಣಿ 2’ ಖ್ಯಾತಿಯ ನಿನಾದ್ ಹರಿತ್ಸ (Ninaad Harithsa) ಜೀವತುಂಬಿದ್ದಾರೆ. ನಾಯಕಿ ಮೀನಾ ಪಾತ್ರದಲ್ಲಿ ‘ಪುಣ್ಯವತಿ’ ಖ್ಯಾತಿಯ ಪ್ರಿಯಾಂಕಾ (Priyanka) ನಟಿಸಿದ್ದಾರೆ.

ninaadಸಾಮಾನ್ಯವಾಗಿ ಬಡಕುಟುಂಬದಲ್ಲಿ ನಡೆಯುವಂತಹ ಕಷ್ಟ, ನೋವು, ಸಂಕಟ, ಆಸೆ ಎಲ್ಲವನ್ನು ಮನಮುಟ್ಟುವಂತೆ ಈ ಧಾರಾವಾಹಿಯಲ್ಲಿ ಹೇಳಲಾಗಿದೆ. ಸುಂದರ ತಾರಾ ಬಳಗವನ್ನು ಹೊಂದಿರುವ ಈ ಸೀರಿಯಲ್‌ನಲ್ಲಿ ಕಲಾವಿದರಂತೂ ಅತ್ಯದ್ಭುತವಾಗಿ ನಟಿಸುತ್ತಿದ್ದಾರೆ. ಪ್ರತಿಯೊಂದು ಪಾತ್ರವು ಅದರದ್ದೇ ಆದ ತೂಕ ಹೊಂದಿದೆ. ತಂದೆ ಪಾತ್ರದಲ್ಲಿ ನಟ ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದಾರೆ.

ninaad 2‘ಆಸೆ’ ಸೀರಿಯಲ್‌ನಲ್ಲಿ ಸೂರ್ಯ-ಮೀನಾರ ಕೋಳಿ ಜಗಳ ನೋಡೋದೇ ಸಿಕ್ಕಾಪಟ್ಟೆ ಮಜಾ. ಇದಕ್ಕೆ ಈಗ ಎಮೋಷನಲ್ ಟಚ್ ನೀಡಲಾಗಿದ್ದು, ಮೀನಾ ತಂದೆ ಸಾವನ್ನಪ್ಪಿದ್ದಾರೆ. ಸೂರ್ಯ ತಂದೆ ಆಕೆಯನ್ನು ಮನೆಯ ಸೊಸೆ ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಸದ್ಯ ಮನೆಯವರ ಸಂತೋಷಕ್ಕಾಗಿ ರಂಗನಾಥನ ಮನೆಗೆ ಸೊಸೆಯಾಗಲು ಹೂ ಮಾರುವ ಹುಡುಗಿ ಮೀನಾ ಒಪ್ಪಿದ್ದಾಳೆ. ಇದು ಆಸೆ ಸೀರಿಯಲ್‌ನ ಸದ್ಯದ ಟ್ರ್ಯಾಕ್‌ ಇದಾಗಿದೆ.

ramesh aravindಇನ್ನು, ಮೇಕಿಂಗ್ ವಿಚಾರದಲ್ಲಿ ‘ಆಸೆ’ ಧಾರಾವಾಹಿ ಒಂದು ಹೆಜ್ಜೆ ಮುಂದಿದೆ. ಜೊತೆಗೆ ಧಾರಾವಾಹಿಯ ಶೀರ್ಷಿಕೆ ಗೀತೆಯಂತೂ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಕಥಾ ನಾಯಕಿ ಮೀನಾಳ ಮದುವೆ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ಗೆಳೆಯನ ಜೊತೆ ತಿಮ್ಮಪ್ಪನ ದರ್ಶನ ಮಾಡಿದ ಜಾಹ್ನವಿ ಕಪೂರ್

‘ಆಸೆ’ ನನ್ನ ಮನಸಿಗೆ ತುಂಬಾ ಇಷ್ಟವಾಗಿರೋ ಧಾರಾವಾಹಿ, ಯಾಕಂದ್ರೆ ಸಾಮಾನ್ಯ ಜನರ ಅಸಮಾನ್ಯ ಕಥೆಯಂತಿರೋ ಈ ಸೀರಿಯಲ್ ನಂಗೆ ನ್ಯಾಚುರಲ್ ಫೀಲ್ ಕೊಡ್ತಿದೆ. ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ವಿಚಾರವನ್ನು ಈ ಕಥೆಯಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಹೀಗಾಗಿ ‘ಆಸೆ’ ಸೀರಿಯಲ್ ನಂಗೆ ತುಂಬಾ ಅಚ್ಚು ಮೆಚ್ಚು ಎಂದು ನಟ ರಮೇಶ್ ಅರವಿಂದ್ ಹಾಡಿ ಹೊಗಳಿದ್ದಾರೆ. ಈ ಮೂಲಕ ಆಸೆ ಸೀರಿಯಲ್ ತಂಡಕ್ಕೆ ಬೆಂಬಲಿದ್ದಾರೆ.

Share This Article