ನಟ, ನಿರ್ದೇಶಕ ದುನಿಯಾ ವಿಜಯ್ (Duniya Vijay) ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ತೆಲುಗಿನಲ್ಲಿ ಘರ್ಜಿಸಿದ್ದಾಯ್ತು, ಈಗ ತಮಿಳಿನತ್ತ ಮುಖ ಮಾಡಿದ್ದಾರೆ. ನಯನತಾರಾಗೆ (Nayanthara) ವಿಲನ್ ಆಗಿ ವಿಜಯ್ ಅಬ್ಬರಿಸಲಿದ್ದಾರೆ. ಸ್ಟಾರ್ ನಟಿಯ ಸಿನಿಮಾದಲ್ಲಿ ಭಾಗವಾಗ್ತಿರುವ ಬಗ್ಗೆ ಸ್ವತಃ ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಮ್ಯಾ ಫ್ಯಾನ್ಸ್‌ಗೆ ಸಿಹಿಸುದ್ದಿ- ಕಮ್ ಬ್ಯಾಕ್ ಬಗ್ಗೆ ಸುಳಿವು ಕೊಟ್ರು ನಟಿ
Advertisement
ನಂದಮೂರಿ ಬಾಲಕೃಷ್ಣಗೆ ವಿಲನ್ ಆಗಿ ದುನಿಯಾ ವಿಜಯ್ ನಟಿಸಿದ ಬಳಿಕ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಸುಂದರ್ ಸಿ. ನಿರ್ದೇಶನದ ಹಾಗೂ ನಯನತಾರಾ ನಟನೆಯ ‘ಮೂಕುತ್ತಿ ಅಮ್ಮನ್ 2’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇದನ್ನು ವಿಜಯ್ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದಾರೆ. ತಮಿಳು ಪ್ರೇಕ್ಷಕರಿಗೆ ಪರಿಚಯಿಸುತ್ತಿರೋದಕ್ಕೆ ನಿರ್ದೇಶಕ ಸುಂದರ್ ಸಿ.ಗೆ ಥ್ಯಾಂಕ್ಯೂ ಎಂದಿದ್ದಾರೆ.
Advertisement
View this post on Instagram
Advertisement
ಅಂದಹಾಗೆ, ವಿಜಯ್ ಅವರು ಸಲಗ, ಭೀಮ ಸಕ್ಸಸ್ ನಂತರ ಕನ್ನಡದ ‘ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಮೋನಿಷಾ ಮತ್ತು ವಿನಯ್ ರಾಜ್‌ಕುಮಾರ್ ನಟನೆಯ ‘ಸಿಟಿಲೈಟ್ಸ್’ ಚಿತ್ರಕ್ಕೆ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.