ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾಗೆ(Dhruva Sarja) ಇಂದು ಹುಟ್ಟುಹಬ್ಬದ ಸಂಭ್ರಮ. ನಟ ಧ್ರುವ ಸರ್ಜಾಗೆ ಈ ವರ್ಷ ತುಂಬಾನೇ ಸ್ಪೆಷಲ್ ಆಗಿದ್ದು, ಇತ್ತೀಚೆಗಷ್ಟೇ ಮುದ್ದು ಮಗಳ ಆಗಮನ ಕೂಡ ಆಗಿದೆ. ಈ ಖುಷಿಯಲ್ಲಿ ಪತ್ನಿ ಪ್ರೇರಣಾ(Prerana Shankar) ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಆಗಿ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಚಂದನವನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಧ್ರುವ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಇಂದು ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿರುವ ಧ್ರುವ ಸರ್ಜಾ ಸದ್ಯ ಮುದ್ದು ಮಗಳ ಆಗಮನದ ಖುಷಿಯಲ್ಲಿದ್ದಾರೆ. ಪತ್ನಿ ಮತ್ತು ಮಗಳ ಆರೋಗ್ಯದ ಹಿತದೃಷ್ಟಿಯಿಂದ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಆಗಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಸೇರುವುದು ಸೂಕ್ತವಲ್ಲ ಎಂದು ಬರ್ತ್‌ಡೇ ಅನ್ನು ಅಭಿಮಾನಿಗಳ ಜೊತೆ ಧ್ರುವ ಸೆಲೆಬ್ರೇಟ್ ಮಾಡುತ್ತಿಲ್ಲ. ಇನ್ನೂ ಪತ್ನಿ ಪ್ರೇರಣಾ, ಪತಿ ಧ್ರುವ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಗೊಬ್ಬರಗಾಲ ಮೈ ಮೇಲೆ ದೆವ್ವ: ಹೆದರಿ ಓಡಿದ ನವಾಜ್, ರೂಪೇಶ್ ರಾಜಣ್ಣ
View this post on Instagram
ನಿಮಗೆ ಜನ್ಮ ದಿನದ ಶುಭಾಶಯಗಳು, ಪ್ರೀತಿಯ ಪತಿ ಮತ್ತು ತಂದೆ. ನನಗೆ ಗೊತ್ತು ಈ ಬಾರಿ ನಾನು ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆಯನ್ನ ನೀಡಿದ್ದೇನೆ ಎಂದು ಪ್ರೇರಣಾ ಸಾಮಾಜಿಕ ಜಾಲತಾಣದಲ್ಲಿ ಲವ್ಲಿ ವಿಶ್ ಜೊತೆ ರೊಮ್ಯಾಂಟಿಕ್ ಫೋಟೋ ಪೋಸ್ಟ್ ಮಾಡಿದ್ದಾರೆ. ಪ್ರೇರಣಾ ಪೋಸ್ಟ್ ಪತಿ ಧ್ರುವ ಕೂಡ, ಮಗಳ ಆಗಮನ ʻಬೆಸ್ಟ್ ಗಿಫ್ಟ್ʼ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ನೆಚ್ಚಿನ ನಟನಿಗೆ ಅಭಿಮಾನಿಗಳ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
View this post on Instagram
ಇನ್ನೂ ಧ್ರುವ ಹುಟ್ಟುಹಬ್ಬದಂದು ಧ್ರುವ ಸರ್ಜಾ ನಟನೆಯ `ಮಾರ್ಟಿನ್'(Martin Film) ಚಿತ್ರದ ಸ್ಪೆಷಲ್ ಪೋಸ್ಟ್ ಅನ್ನು ಚಿತ್ರತಂಡ ರಿಲೀಸ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಹಾರೈಸಿದೆ. ಧ್ರುವ ಗನ್ ಹಿಡಿದು ರಾ ಲುಕ್‌ನಲ್ಲಿ ರಗಡ್ ಆಗಿ ಮಿಂಚಿದ್ದಾರೆ.