ನವದೆಹಲಿ: ಸಿಪಿಎಂ ಪಕ್ಷ ತೊರೆದು ಕಾಂಗ್ರೆಸ್ ಸೇರಿರುವ ಜೆಎನ್‍ಯು ವಿದ್ಯಾರ್ಥಿ ಸಂಘದ ಮಾಜಿ ಮುಖಂಡ ಕನ್ಹಯ್ಯಾ ಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಾನು ಬಿಜೆಪಿಯನ್ನು ತುಕ್ಡೆ-ತುಕ್ಡೆ( Tukde-Tukde) ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಇಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ: ಕನ್ನಯ್ಯ ಕುಮಾರ್
Advertisement
Advertisement
ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂದು ದೃಢವಾಗಿ ನಂಬಿದ್ದೇನೆ. ಆ ಪಕ್ಷದ ಸೋಲನ್ನು ನಾನು ನೋಡುತ್ತೇನೆ. ಬಿಜೆಪಿ ನನ್ನನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಕರೆಯುತ್ತದೆ. ನಾನು ಬಿಜೆಪಿಯನ್ನು ತುಕ್ಡೆ ತುಕ್ಡೆ ಮಾಡುತ್ತೇನೆ. ಬಿಜೆಪಿ ಪಕ್ಷವು ಗೋಡ್ಸೆಯನ್ನು ರಾಷ್ಟ್ರಪಿತ ಎಂದು ಪರಿಗಣಿಸುತ್ತದೆ ಹೊರತು, ಗಾಂಧೀಜಿಯನ್ನಲ್ಲ ಎಂದು ಕಿಡಿ ಕಾರಿದ್ದಾರೆ.
Advertisement
Advertisement
ಮಹಾತ್ಮ ಗಾಂಧೀಯವರ ಹಂತಕ ನಾಥೂರಾಮ್ ಗೋಡ್ಸೆಯನ್ನು ಉಲ್ಲೇಖಿಸಿದ ಕನ್ಹಯ್ಯ ಕುಮಾರ್, ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತಾ ಶಾ ಅವರನ್ನು ನಾಥೂರಾಮ್- ಬನಾಯಿ ಜೋಡಿ ಎಂದು ಕರೆದಿದ್ದಾರೆ. ಬಿಜೆಪಿ ಪಕ್ಷದ ಸಿದ್ಧಾಂತ ರಾಷ್ಟ್ರಪಿತನ ವಿರುದ್ಧ ಸಂಪೂರ್ಣ ವಿರುದ್ಧವಾಗಿದೆ ಎಂದಿದ್ದಾರೆ.
ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ, ಏಕೆಂದರೆ ಇದು ಕೇವಲ ಪಕ್ಷವಲ್ಲ, ಒಂದು ಆಲೋಚನೆ. ಇದು ದೇಶದ ಅತಿ ಹಳೆಯ ಮತ್ತು ಅತ್ಯಂತ ಪ್ರಜಾಸತ್ತಾತ್ಮಕ ಪಕ್ಷ. ಕಾಂಗ್ರೆಸ್ ಪಕ್ಷ ಇಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ ಎಂದು ಕನ್ನಯ್ಯ ಕುಮಾರ್ ಈ ಹಿಂದೆ ಹೇಳಿದ್ದರು.