ಬಾಲಿವುಡ್ ಕ್ವೀನ್ ಕಂಗನಾ ರಣಾವತ್ (Kangana Ranaut) ಬಿಗ್ ಬಾಸ್ ಅಖಾಡಕ್ಕೆ ಇಳಿದಿದ್ದಾರೆ. ಹಿಂದಿ ಬಿಗ್ ಬಾಸ್ ಅನ್ನು ವೀಕ್ಷಿಸುತ್ತಿರುವ ಕಂಗನಾ, ಬಿಗ್ ಬಾಸ್ ಸ್ಪರ್ಧಿ ಅಂಕಿತಾ ಲೋಖಂಡೆ ಪರ ಬ್ಯಾಟಿಂಗ್ ಬೀಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಟಿ ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ (Vicky Jain) ದಂಪತಿ ಇದ್ದಾರೆ. ಟಾಸ್ಕ್ ವಿಚಾರವಾಗಿ ಗಂಡ ಹೆಂಡತಿ ಮಧ್ಯಯೇ ಸಾಕಷ್ಟು ಕಿತ್ತಾಟ ನಡೆದಿದೆ. ಡಿವೋರ್ಸ್ ವಿಚಾರವೂ ಪ್ರಸ್ತಾಪವಾಗಿದೆ. ಸಹಜವಾಗಿಯೇ ಅವರ ಕುಟುಂಬ ಆತಂಕದಲ್ಲಿದೆ.
Advertisement
ಈ ಕುರಿತಾಗಿ ಅಂಕಿತಾ ಅತ್ತೆಗೆ ಧೈರ್ಯ ತುಂಬಿರುವ ಕಂಗನಾ, ಯಾವುದೇ ಕಾರಣಕ್ಕೂ ಇಬ್ಬರನ್ನೂ ದೂರವಾಗುವುದಕ್ಕೆ ಬಿಡೋದಿಲ್ಲ. ಬಿಗ್ ಬಾಸ್ ಅದೊಂದು ಗೇಮ್ ಅಷ್ಟೇ. ಮನೆ ಮುರಿಯುವಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಕಂಗನಾ ಹೇಳಿದ್ದಾರೆ. ಈ ಬಾರಿ ಬಿಗ್ ಬಾಸ್ ಟ್ರೋಫಿ ಅಂಕಿತಾಗೆ ಬರಬೇಕು ಎಂದು ಹಾರೈಸಿದ್ದಾರೆ.
Advertisement
Advertisement
ಅಂಕಿತಾ ದಂಪತಿ ಹೈ ಡ್ರಾಮಾ
Advertisement
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮತ್ತೆ ಸುದ್ದಿ ಆಗುತ್ತಿದ್ದಾರೆ ಅಂಕಿತಾ ಲೋಖಂಡೆ (Ankita Lokhande) ಹಾಗೂ ವಿಕ್ಕಿ ದಂಪತಿ. ತನ್ನ ಪತಿ ಬಿಗ್ ಬಾಸ್ ಸ್ಪರ್ಧಿ ಮನ್ನಾರಾ ಚೋಪ್ರಾ ಜೊತೆ ಕ್ಲೋಸ್ ಆಗುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಪತಿ ವಿಕ್ಕಿ ಮೇಲೆ ಕೋಪಗೊಂಡಿದ್ದಾರೆ. ಆತನನ್ನು ಮದುವೆ ಆಗಿದ್ದಕ್ಕೆ ಕಣ್ಣೀರು ಇಟ್ಟಿದ್ದಾರೆ. ಜೊತೆಗೆ ವಿಷಾದವನ್ನೂ ವ್ಯಕ್ತ ಪಡಿಸಿದ್ದಾರೆ. ಆಕೆ ನಿನ್ನ ಜೀವನದಲ್ಲಿ ಬಂದಳು. ನೀನು ಇಷ್ಟ ಪಡ್ತಿದ್ದೀಯಾ ಎಂದು ಮಾತನಾಡಿದ್ದಾರೆ.
ಬಿಗ್ ಬಾಸ್ (Bigg Boss) ಮನೆಯಲ್ಲಿ ವಿಕ್ಕಿ ಮತ್ತು ಅಂಕಿತಾ ನಡೆಯನ್ನೇ ಅರ್ಥ ಮಾಡಿಕೊಳ್ಳಲು ಆಗುತ್ತಿದೆ. ಮೊನ್ನೆಯಷ್ಟೇ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡು ಈ ಜೋಡಿ ಮಲಗಿತ್ತು. ಅದು ರಾತ್ರಿ ವೇಳೆ ಸುಮ್ಮನೆ ಮಲಗಿಲ್ಲ, ಬ್ಲ್ಯಾಂಕೆಟ್ ಒಳಗೆ ಚಲಿಸಿದ್ದರು. ಬ್ಲ್ಯಾಂಕೆಟ್ ಅಸ್ತವ್ಯಸ್ತಗೊಂಡಿತ್ತು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.
ಇದೇ ಜೋಡಿ ಕೆಲವು ದಿನಗಳ ಹಿಂದೆ ಇದೇ ಬಿಗ್ ಬಾಸ್ ಮನೆಯಲ್ಲಿ ಡಿವೋರ್ಸ್ (Divorce) ಕುರಿತಂತೆ ಮಾತನಾಡಿದ್ದರು. ಈ ನಡೆಯೂ ಅಚ್ಚರಿಗೆ ಕಾರಣವಾಗಿತ್ತು. ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಾರೆ. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಾರೆ. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದರು.
ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಈಗ ಅಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಮೊನ್ನೆಯ ಸಂಚಿಕೆಯಲ್ಲಿ ವಿಕ್ಕಿ ಜೈನ್ ವಿವಾಹಿತರ ಕಷ್ಟಗಳ ಬಗ್ಗೆ ಮಾತಾಡುತ್ತಾರೆ. ಅಷ್ಟೊಂದು ಕಷ್ಟವಾದರೆ, ವಿಚ್ಛೇದನ ಪಡೆದುಕೊಳ್ಳೋಣ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ ಅಂಕಿತಾ. ಈಗ ಮತ್ತೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.