ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾಧಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರ ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೇ, ವಿದೇಶಗಳಲ್ಲೂ ಈ ಕುರಿತು ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಭಾರತದ ಹಲವು ಕಡೆ ಪ್ರತಿಭಟನೆಯು ಹಿಂಸೆಯ ರೂಪ ಪಡೆದುಕೊಂಡಿದೆ. ಈ ನಡುವೆ ಇದೇ ವಿಷಯವನ್ನಿಟ್ಟುಕೊಂಡು ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್, ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು ಈ ವಿಷಯದಲ್ಲಿ ಅಮೀರ್ ಖಾನ್ ಅವರನ್ನು ಎಳೆತಂದಿದ್ದಾರೆ.
Advertisement
ನೂಪುರ್ ಶರ್ಮಾ ಹೇಳಿಕೆಯ ಬೆನ್ನಿಗೆ ನಿಂತಿರುವ ಕಂಗನಾ ರಣಾವತ್, ಪಿಕೆ ಸಿನಿಮಾದ ದೃಶ್ಯವನ್ನು ಉಲ್ಲೇಖಿಸಿ ‘ನಾನು ಹಿಂದೂ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಶಿವನ ವೇಷಧಾರೆ ಕಲಾವಿದ ವಾಶ್ ರೂಮ್ ನಲ್ಲಿ ಬಚ್ಚಿಟ್ಟುಕೊಳ್ಳುವುದು, ಶಿವನನ್ನು ಅಮೀರ್ ಖಾನ್ ಅಟ್ಟಾಡಿಸಿಕೊಂಡು ಹೋಗುವ ದೃಶ್ಯದ ಜೊತೆಗೆ ನೂಪುರ್ ಶರ್ಮಾ ಅವರ ಪ್ರತಿಕೃತಿ ನೇತಾಡುವ ದೃಶ್ಯವನ್ನೂ ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಸೋನಮ್ ಕಪೂರ್ ಬೇಬಿ ಬಂಪ್
Advertisement
Advertisement
ನೂಪುರ್ ಶರ್ಮಾ ವಿಚಾರದಲ್ಲಿ ಮೊದಲಿನಿಂದಲೂ ಅವರ ಬೆಂಬಲಕ್ಕೆ ನಿಂತಿರುವ ಕಂಗನಾ, ಈಗಲೂ ಕೂಡ ನೂಪುರ್ ಪರವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಶರ್ಮಾ ಅವರ ಭಯಾನಕ ಚಿತ್ರವು ಅಪಘಾನಿಸ್ತಾನದಿಂದ ಬಂದಿಲ್ಲ, ನನ್ನದೇ ಶಾಂತಿಪ್ರಿಯ ದೇಶದಿಂದ ಬಂದಿದ್ದು’ ಎಂದು ಕೂಡ ಅವರು ಬರೆದುಕೊಂಡಿದ್ದಾರೆ.