ಬಾಲಿವುಡ್ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತ ತಾರೆ ಕಂಗನಾ ರಣಾವತ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಿಡುಗಡೆಯಿಂದ ಈವರೆಗೂ ಚಿತ್ರದ ಜತೆಗೆ ಇದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನಟ ನಟಿಯರು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಗರಂ ಆದರು. ಇಂತಹ ಚಿತ್ರವನ್ನು ಬೆಂಬಲಿಸಬೇಕು ಎಂದು ಅಭಿಮಾನಿಗಳಿಗೆ ಕರೆ ಕೊಟ್ಟರು. ಇಂಥದ್ದೊಂದು ಸಿನಿಮಾ ಬಂದು, ಬಾಲಿವುಡ್ ಪಾಪ ತೊಳೆಯಿತು ಎಂದು ಬರೆದುಕೊಂಡರು. ಇಷ್ಟೆಲ್ಲ ಮಾಡಿದ್ದು ಅವರು ನಿರ್ದೇಶಕ ವಿವೇಕ್ ಅಗ್ನಿಹೋತ್ರ ಅವರ ಮೇಲಿನ ಅಭಿಮಾನಕ್ಕಂತೆ. ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?
ಇದು ಬಿಟೌನ್ ಅಂಗಳದಿಂದ ಹೊರ ಬಿದ್ದಿರುವ ಮಾಹಿತಿ ಪ್ರಕಾರ ನಿರ್ದೇಶಕ ವಿವೇಕ್ ಅಗ್ನಿಹೋತ್ರ ಮತ್ತು ಕಂಗನಾ ರಣಾವತ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ತಯಾರಿ ಆಗಲಿದೆಯಂತೆ. ದೇಶ ಪ್ರೇಮ ಸಾರುವಂತಹ ಕಥೆಯನ್ನು ಕಂಗನಾ ಅವರಿಗಾಗಿ ನಿರ್ದೇಶಕರು ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯಾಕಾಂಡವನ್ನು ಆಧರಿಸಿದ ಸಿನಿಮಾ ದಿ ಕಾಶ್ಮೀರ್ ಫೈಲ್ಸ್. ಹೀಗಾಗಿ ಕಂಗನಾ ರಣಾವತ್, ಈ ಸಿನಿಮಾದ ಕುರಿತು ಅನೇಕ ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಂಥದ್ದೊಂದು ಚಿತ್ರಕ್ಕೆ ಬೆಂಬಲವಾಗಿ ನಿಂತವರಿಗೆ ಅಭಿನಂದನೆ ಸಲ್ಲಿಸಿದ್ದರು. ನಿಲ್ಲದವರನ್ನು ಝಾಡಿಸಿದ್ದರು. ಇದನ್ನೂ ಓದಿ : ಪುನೀತ್ ಹುಟ್ಟು ಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ ಮಂದಣ್ಣ ಮತ್ತೆ ನೆಟ್ಟಿಗರು ಗರಂ
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಿನಿಮಾದ ಬೆನ್ನಿಗೆ ನಿಂತರು. ಕರ್ನಾಟಕದಲ್ಲೂ ಈ ಸಿನಿಮಾದ ಹವಾ ಜೋರಾಯಿತು. ಸದ್ಯದಲ್ಲೇ ಕನ್ನಡಕ್ಕೂ ಈ ಸಿನಿಮಾ ಡಬ್ ಆಗಲಿದೆ ಎನ್ನುವ ಮಾಹಿತಿ ಇದೆ.