ರಿಲೀಸ್‌ಗೂ ಮುನ್ನವೇ ವಿವಾದಕ್ಕೆ ಸಿಲುಕಿದ ಕಂಗನಾ ನಟನೆಯ `ಎಮರ್ಜೆನ್ಸಿ’ ಚಿತ್ರ

Public TV
1 Min Read
KANGANA

ಬಾಲಿವುಡ್‌ನ ವಿವಾದಿತ ನಟಿ ಕಂಗನಾ ರಣಾವತ್ ನಟನೆಯ `ಎಮರ್ಜೆನ್ಸಿ’ ಚಿತ್ರದ ಫಸ್ಟ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಇಂದಿರಾ ಗಾಂಧಿ ಅವರ ಲುಕ್‌ನಲ್ಲಿ ಕಂಗನಾ ಮಿಂಚಿದ್ದರು. ಈ ಬೆನ್ನಲ್ಲೇ ಈ ಸಿನಿಮಾ ಕುರಿತು ರಿಲೀಸ್‌ಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ.

ಕಂಗನಾ ರಣಾವತ್ ನಿರ್ದೇಶನದ `ಎಮರ್ಜೆನ್ಸಿ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ವೈರಲ್‌ ಆಗಿರುವ ಬೆನ್ನಲ್ಲೇ ಈ ಚಿತ್ರದ ಕುರಿತು ಕಾಂಗ್ರೆಸ್ ಉಪಾಧ್ಯಕ್ಷೆ ಸಂಗೀತಾ ಶರ್ಮಾ ʻಬಿಜೆಪಿ ಏಜೆಂಟ್ʼ ಎಂದು ಟಾಂಗ್‌ ಕೊಟ್ಟಿದ್ದರು. ಇಂದಿರಾ ಗಾಂಧಿ ಅವರ ಇಮೇಜ್‌ಗೆ ಧಕ್ಕೆ ತರಲು ಕಂಗನಾ ಈ ಪಾತ್ರ ಮಾಡ್ತಿದ್ದಾರೆ ಅಂತಾ ಕಂಗನಾ ಕಡೆ ಚಾಟಿ ಬೀಸಿದ್ದರೆ. ರಿಲೀಸ್‌ಗೂ ಮುನ್ನವೇ ಈ ಸಿನಿಮಾ ತಾವು ನೋಡಬೇಕು ಎಂದು ಸಂಗೀತಾ ಬೇಡಿಕೆ ಕೂಡ ಇಟ್ಟಿದ್ದಾರೆ. ಇದನ್ನೂ ಓದಿ:ತನಗಿಂತ 16 ವರ್ಷ ಚಿಕ್ಕವಳೊಂದಿಗೆ ಹೃತಿಕ್ ರೋಷನ್ ಡೇಟಿಂಗ್: ಮದುವೆ ಯಾವಾಗ?

Kangana Ranaut 3ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಜ್‌ಪಾಲ್ ಸಿಂಗ್, ಎಮರ್ಜೆನ್ಸಿ ಸಿನಿಮಾ ಈ ದೇಶದ ಪ್ರಜಾಪ್ರಭುತ್ವದ ಮೇಲಿನ ಚಿತ್ರವಾಗಿದೆ. ಇಂದಿರಾ ಗಾಂಧಿ ಆ ಸಮಯದಲ್ಲಿ ನಾಯಕಿಯಾಗಿದ್ದರು. ಹಾಗಾಗಿ ಚಿಂತಿಸಬೇಕಿಲ್ಲ ಎಂದು ಕಂಗನಾ ಪರ ರಾಜ್‌ಪಾಲ್ ಸಿಂಗ್, ಸಂಗೀತಾಗೆ ಪ್ರತಿಕ್ರಿಯಿಸಿದ್ದಾರೆ. ಈ ವಿವಾದದ ಕುರಿತು ಸಾಮಾಜಿಕ ಜಾಲತಾಣಲ್ಲಿ ಸಖತ್ ಚರ್ಚೆಯಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *