ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌

Public TV
1 Min Read
Kangana Ranaut to bengaluru

ಬೆಂಗಳೂರು: ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್‌ (Kangana Ranaut) ಶುಕ್ರವಾರ ಬೆಂಗಳೂರಿನ (Bengaluru) ಶಿವೋಹಂ ಶಿವ ಮತ್ತು ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ಪಾರ್ಥನೆ ಸಲ್ಲಿಸಿದ್ದರು.

Kangana Ranaut to bengaluru 2

65 ಅಡಿ ಎತ್ತರದ ಭವ್ಯವಾದ ಶಿವನ ಪ್ರತಿಮೆ ಹಾಗೂ ಧ್ಯಾನ ಮಂದಿರವನ್ನು ಹೊಂದಿರುವ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದರು. ಆಧ್ಯಾತ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ನಟಿ ಅದೇ ಆವರಣದಲ್ಲಿರುವ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೂ ಹೋಗಿ ಸ್ವಲ್ಪ ಕಾಲಕಳೆದರು.ಇದನ್ನೂ ಓದಿ: ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್

ಇದೇ ವೇಳೆ ದೇವಸ್ಥಾನದ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಏರ್-ಆತ್ಮನ್ ಇನ್ ರವಿ ಅವರ ಜೊತೆ ಮಾತುಕತೆ ನಡೆಸಿದರು. ಅವರ ಭೇಟಿ ಕುರಿತು ಮಾತನಾಡಿದ ಕಂಗನಾ, ಏರ್ ಆತ್ಮನ್ ಜೊತೆಗಿನ ಸಂಭಾಷಣೆ ಬಹಳ ಅರ್ಥಪೂರ್ಣವಾಗಿತ್ತು. ಅವರ ಆಂತರಿಕ ಆಧ್ಯಾತ್ಮಿಕ ದೃಷ್ಟಿಕೋನ ನನ್ನಲ್ಲಿ ಪ್ರತಿಧ್ವನಿಸುತ್ತದೆ. ನಾನು ಬೆಂಗಳೂರಿನಲ್ಲಿರುವಾಗಲೆಲ್ಲಾ, ಧ್ಯಾನ ಮಾಡಲು ಇಲ್ಲಿಗೆ ಬರಲು ಇಷ್ಟಪಡುತ್ತೇನೆ ಎಂದು ಹೇಳಿದರು.

Kangana Ranaut to bengaluru 1

ಈ ಕುರಿತು ಏರ್-ಆತ್ಮನ್ ಇನ್ ರವಿ ಮಾತನಾಡಿ, ಕಂಗನಾ ರಣಾವತ್‌ ಅವರನ್ನು ಶಿವೋಹಂ ಶಿವ ದೇವಾಲಯಕ್ಕೆ ಸ್ವಾಗತಿಸುವುದು ಗೌರವದ ಸಂಗತಿ. ಜೀವನದಲ್ಲಿ ಆಂತರಿಕ ಶಾಂತಿಗಾಗಿ ಸುಂದರ ಆಲೋಚನೆಗಳು ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದೆವು. ನಮ್ಮನ್ನು ನಾವು ದೈವಿಕ ಆತ್ಮ ಎಂದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಇದೆಲ್ಲವೂ ನಮ್ಮನ್ನು ನಾವು ಸಂತೋಷದ ಜೀವನಕ್ಕೆ ಕೊಂಡೊಯ್ಯುವ ಮಾರ್ಗವಾಗಿದೆ ಎಂದರು.ಇದನ್ನೂ ಓದಿ: Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

Share This Article