ನವದೆಹಲಿ: ಟ್ವಿಟ್ಟರ್‌ನಲ್ಲಿ (Twitter) ಬ್ಲೂ ಟಿಕ್ ಪರಿಶೀಲಿಸಿದ ಖಾತೆ (Verified Accounts) ಪಡೆಯಲು ತಿಂಗಳಿಗೆ 8 ಡಾಲರ್ (USD) ಪಾವತಿಸಬೇಕೆನ್ನುವ ಟ್ವಿಟ್ಟರ್ ಮಾಲೀಕ ಎಲೋನ್ ಮಸ್ಕ್ (Elon Musk) ನಿರ್ಧಾರಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಬೆಂಬಲ ವ್ಯಕ್ತಪಡಿಸಿದ್ದಾರೆ.
Advertisement
ಸಾಮಾಜಿಕ ಮಾಧ್ಯಮ (Social Media) ವೇದಿಕೆಯನ್ನು ಬೌದ್ಧಿಕವಾಗಿ ಮತ್ತು ಸೈದ್ಧಾಂತಿಕವಾಗಿ ಪ್ರೇರೇಪಿಸುವುದರಿಂದ ಈ ನಿರ್ಧಾರ ಉತ್ತಮವಾಗಿದೆ. ಆಧಾರ್ ಕಾರ್ಡ್ (Aadhar Card) ಹೊಂದಿರುವ ಯಾರಾದರೂ ಪರಿಶೀಲಿಸಿದ ಬ್ಲೂ ಟಿಕ್ ಖಾತೆಯನ್ನು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಬೇಕೆಂದ್ರೆ ತಿಂಗಳಿಗೆ ದುಡ್ಡು ಕೊಡಬೇಕು
Advertisement
Advertisement
ಮುಂದುವರಿದು, ಟ್ವಿಟ್ಟರ್ ಅತ್ಯುತ್ತಮ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಇದು ನಮ್ಮ ದೃಷ್ಟಿಕೋನ ಅಥವಾ ಜೀವನ ಶೈಲಿಯನ್ನು ಬೌದ್ಧಿಕವಾಗಿ ಮತ್ತು ಸೈದ್ಧಾಂತಿಕವಾಗಿ ಪ್ರೇರೇಪಿಸುತ್ತದೆ. ಕೆಲವರು ಬ್ಲೂಟಿಕ್ ಪರಿಶೀಲಿಸಿದ ಖಾತೆಯನ್ನು ಪಡೆಯುವಾಗಲೂ ನನಗೆ ಈ ಪರಿಕಲ್ಪನೆ ಅರ್ಥವಾಗಿರಲಿಲ್ಲ. ಉದಾಹರಣೆಗೆ ನಾನು ಪರಿಶೀಲಿಸಿದ ಖಾತೆ ಪಡೆದಿರುತ್ತೇನೆ. ಆದರೆ ನನ್ನ ತಂದೆ ಬ್ಲೂಟಿಕ್ ಪಡೆದಿಲ್ಲವೆಂದಾದರೆ ಅದು ಅನಧಿಕೃತ ಖಾತೆ ಎಂದು ತಳ್ಳಿಹಾಕುತ್ತಾರೆ. ಆದ್ದರಿಂದ ಆಧಾರ್‌ಕಾರ್ಡ್ (Aadhar Card) ಹೊಂದಿರುವ ಪ್ರತಿಯೊಬ್ಬರೂ ಪರಿಶೀಲಿಸಿದ ಖಾತೆ ಪಡೆಯುಬೇಕು, ಅದು ತುಂಬಾ ಸರಳ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಸ್ಕ್ ಪಾಲಾಗುತ್ತಿದ್ದಂತೆ ಪರ್ಯಾಯ ಆಪ್ ರಚನೆಯಲ್ಲಿ ತೊಡಗಿದ ಟ್ವಿಟ್ಟರ್ ಸಂಸ್ಥಾಪಕ
Advertisement
ಟೆಸ್ಲಾ ಕಂಪೆನಿ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ ಮಾಲೀಕರಾದ ನಂತರ ಹಲವು ಬದಲಾವಣೆಗಳನ್ನ ತಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಪರಿಶೀಲಿಸಿದ ಬ್ಲೂಟಿಕ್ ಖಾತೆ ಪಡೆಯಬೇಕಾದರೆ ತಿಂಗಳಿಗೆ 8 ಡಾಲರ್ (655 ರೂಪಾಯಿ) ಪಾವತಿಸುವ ನಿಯಮ ಜಾರಿಗೆ ತಂದಿದ್ದಾರೆ. ಈ ನಿರ್ಧಾರಕ್ಕೆ ಕಂಗನಾ ರಣಾವತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.