ಒಂದಿಲ್ಲೊಂದು ಕಾರಣಕ್ಕಾಗಿ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ ಬಾಲಿವುಡ್ ನಟಿ ಕಂಗನಾ ರಣಾವತ್. ಅವರ ಬಹುತೇಕ ವಿವಾದಗಳು ಸಿದ್ಧಾಂತ ಮತ್ತು ನಿಲುವುಗಳ ತಳಹದಿಯಲ್ಲೇ ಹುಟ್ಟಿಕೊಂಡಿರುತ್ತವೆ. ಆದರೂ, ಅವುಗಳನ್ನು ಎದುರಿಸುತ್ತಲೇ ಮತ್ತೊಂದು ವಿವಾದಕ್ಕೆ ಜಂಪ್ ಆಗಿರುತ್ತಾರೆ. ಈಗ ಆಗಿರುವುದು ಅದೇ, ಅವರ ಧಾಕಡ್ ಸಿನಿಮಾ ಮಕಾಡೆ ಮಲಗಿದೆ. ನಿರ್ಮಾಪಕರನ್ನು ಅವರು ಆರ್ಥಿಕ ಸಂಕಷ್ಟಕ್ಕೀಡು ಮಾಡಿದ್ದಾರೆ ಎನ್ನುವ ಆರೋಪವಿದೆ. ಅದೆಲ್ಲವನ್ನೂ ಬಿಟ್ಟು ಕಂಗನಾ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ.
ಹೌದು, ಮೊನ್ನೆಯಷ್ಟೇ ಕಂಗನಾ ರಣಾವತ್ ನಟನೆಯ ಹೊಸ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಎಮರ್ಜೆನ್ಸಿ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಹೀಗಾಗಿಯೇ ಚಿತ್ರಕ್ಕೆ ಎಮರ್ಜೆನ್ಸಿ ಎಂದೇ ಹೆಸರಿಟ್ಟಿದ್ದಾರೆ. ಹಾಗಾಗಿ ಈ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಟೀಸರ್ ನೋಡಿ ವಿರೋಧ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ
ಎಮರ್ಜೆನ್ಸಿ ಕುರಿತಾಗಿ ಸಿನಿಮಾ ಮಾಡುತ್ತಿದ್ದರು, ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ. ಅದರಲ್ಲೂ ಸಮಾಜಕ್ಕೆ ತಪ್ಪು ಸಂದೇಶಗಳನ್ನು ಕೊಡುವ ಸಿನಿಮಾಗಳಿದ್ದರೆ, ಮೊದಲು ಅದರಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ, ಕಂಗನಾ ಪಾತ್ರವು ಇಂದಿರಾ ಗಾಂಧಿ ಅವರನ್ನು ಅವಮಾನಿಸುವಂತ ರೀತಿಯಲ್ಲಿ ಇದೆ ಎಂದು ಆರೋಪಿಸಿ, ಟೀಸರ್ ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಕೂಡಲೇ ಈ ಸಿನಿಮಾವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.