ಮುಂಬೈ: ನಿಮ್ಮ ಧೈರ್ಯವನ್ನು ತೋರಿಸಲು ಬಯಸಿದರೆ, ಅಫ್ಘಾನಿಸ್ತಾನದಲ್ಲಿ ಬುರ್ಕಾವನ್ನು ಧರಿಸದೇ ಪ್ರದರ್ಶಿಸಿ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ.
Advertisement
ದೇಶದಲ್ಲಿ ಬಾರಿ ಚರ್ಚೆಯಾಗುತ್ತಿರುವ ಹಿಜಬ್ ವಿವಾದ ಕುರಿತಂತೆ ನಟಿ ಕಂಗನಾ ರಣಾವತ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಹಿಳೆಯರ ಎರಡು ವ್ಯತಿರಿಕ್ತ ಫೋಟೋಗಳನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದು, ಸ್ವತಂತ್ರ್ಯವಾಗಿರುವುದನ್ನು ಕಲಿಯಿರಿ, ನಿಮ್ಮನ್ನು ಪಂಜರದಲ್ಲಿಟ್ಟುಕೊಳ್ಳಬೇಡಿ ಎಂದಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಮೂಗುತಿ ಸುಂದರಿ ಸುಷ್ಮಿತಾ ಗೌಡ
Advertisement
Advertisement
ಒಂದು ಫೋಟೋದಲ್ಲಿ ಮಹಿಳೆಯರು ಸ್ವಿಮಿಂಗ್ ಡ್ರೆಸ್ ಧರಿಸಿ ಕುಳಿತುಕೊಂಡಿದ್ದರೆ, ಮತ್ತೊಂದರಲ್ಲಿ ಮಹಿಳೆಯರು ಬುರ್ಖಾ ತೊಟ್ಟಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಈ ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ 1973ರಲ್ಲಿ ಇರಾನ್ ಮತ್ತು ಈಗ. 50 ವರ್ಷಗಳ ಅವಧಿಯಲ್ಲಿ ಬಿಕಿನಿಯಿಂದ ಮಹಿಳೆಯರು ಬುರ್ಖಾಕ್ಕೆ ಬಂದಿದ್ದಾರೆ. ಇತಿಹಾಸದಿಂದ ಪಾಠ ಕಲಿಯದವರು ಅದನ್ನು ಮತ್ತೆ ಪುನರಾವರ್ತಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.
Advertisement
ಕರ್ನಾಟಕದ ಹಲವಾರು ಶಾಲಾ ಕಾಲೇಜುಗಳಲ್ಲಿ ಹಿಜಬ್ ಧರಿಸುವುದ್ದಕ್ಕಾಗಿ ಮುಸ್ಲಿಂ ಹೆಣ್ಣು ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕರಾವಳಿ ಪಟ್ಟಣವಾದ ಉಡುಪಿಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯು ಹಿಜಾಬ್ ಧರಿಸಿದ್ದಕ್ಕಾಗಿ ಆರು ಮುಸ್ಲಿಂ ಹುಡುಗಿಯರನ್ನು ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಿದ ಹಿನ್ನೆಲೆ ವಿವಾದ ಭುಗಿಲೆದ್ದಿದೆ. ಹಿಜಬ್ ಧರಿಸುವುದನ್ನು ವಿರೋಧಿಸಿ ಕೆಲವು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲಿ ಧರಿಸಿ ಶಾಲಾ ಹಾಗೂ ಕಾಲೇಜುಗಳಿಗೆ ಬರಲು ಆಗಮಿಸಿದ್ದಾರೆ. ಇದನ್ನೂ ಓದಿ: ಪವರ್ ಫುಲ್ ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ
ಸದ್ಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಲಾದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಿಚಾರಣೆ ನಡೆಸಿ ಮಧ್ಯಂತರ ಆದೇಶವನ್ನು ಹೊರಡಿಸಿದೆ. ರಾಜ್ಯಗಳಲ್ಲಿನ ಕಾಲೇಜುಗಳನ್ನು ಮತ್ತೆ ತೆರೆಯಬಹುದು. ಆದರೆ ವಿಷಯ ಬಾಕಿ ಇರುವವರೆಗೆ ವಿದ್ಯಾರ್ಥಿಗಳು ಧಾರ್ಮಿಕವಾದ ಯಾವುದೇ ಬಟ್ಟೆಯನ್ನು ಧರಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದೆ.