ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಬೃಹತ್ ಮುಂಬೈ ಮಹಾನಗರ ಪಾಲಿಕೆಯು ಅವರ ಮನೆಯ ಒಂದು ಭಾಗವನ್ನು 2020ರಲ್ಲಿ ಕೆಡವಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲು ಏರಿದ್ದರು. ಈ ಹೋರಾಟದಲ್ಲಿ ಅವರು ಗೆದ್ದಿದ್ದರು.
ಕಂಗನಾ ರಣಾವತ್ ಮನವಿಯನ್ನು ಪುರಸ್ಕರಿಸಿದ್ದ ಮಾನ್ಯ ನ್ಯಾಯಾಲಯವು ‘ಕಂಗನಾಗೆ ಪರಿಹಾರ (Compensation) ನೀಡಬೇಕು ಎಂದು ನ್ಯಾಯಾಲಯ ಹೇಳಿತ್ತು. ಆದರೆ, ಈವರೆಗೂ ತಮಗೆ ಹಣ ಬಂದಿಲ್ಲವೆಂದು ಅವರು ಹೇಳಿಕೊಂಡಿದ್ದಾರೆ. ಮಹಾನಗರ ಪಾಲಿಕೆಯು ಮೌಲ್ಯಮಾಪಕರನ್ನು ಈವರೆಗೂ ಕಳುಹಿಸಿಲ್ಲವೆಂದು ತಿಳಿಸಿದ್ದಾರೆ. ಇದನ್ನೂ ಓದಿ:ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್
ಈ ಸಂಬಂಧ ಅವರು ಮಹಾರಾಷ್ಟ್ರ ಸಿಎಂ ಏಕ್ ನಾಥ್ ಶಿಂಧೆ (Ek Nath Shinde) ಅವರನ್ನು ಭೇಟಿ ಮಾಡಿ, ಮೌಲ್ಯಮಾಪಕರನ್ನು ಕಳುಹಿಸಬೇಡಿ. ನಾನು ಪರಿಹಾರ ಹಣವನ್ನು ಸ್ವೀಕರಿಸುವುದಿಲ್ಲ. ಅದು ತೆರಿಗೆದಾರರ ಹಣವಾಗಿದೆ ಎಂದು ಹೇಳಿದ್ದಾರಂತೆ. ಮಹಾನಗರ ಪಾಲಿಕೆಯ ವಿರುದ್ಧ ಅಸಮಾಧಾನಗೊಂಡಿರುವ ಕಂಗನಾ, ಯಾವುದೇ ಕಾರಣಕ್ಕೂ ಹಣ ಪಡೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಹಿಂದೆ ಮಹಾರಾಷ್ಟ್ರ ಸರಕಾರ ಹಾಗೂ ಕಂಗನಾ ನಡುವೆ ಜಟಾಪಟಿ ನಡೆದಿತ್ತು. ಹಾಗಾಗಿ ಕಂಗನಾಗೆ ವೈಪ್ಲಸ್ ಕೆಟಗರಿ ಭದ್ರತೆ ಒದಗಿಸಲಾಗಿತ್ತು. ಈ ನಡೆಗೆ ಭಾರೀ ಟೀಕೆ ಕೇಳಿ ಬಂದಿತ್ತು. ಜನರ ತೆರಿಗೆ ಹಣದಲ್ಲಿ ಭದ್ರತೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು ಹಲವರು. ಪರಿಹಾರ ನಿರಾಕರಿಸುವ ಮೂಲಕ ಇವರಿಗೆ ಟಾಂಗ್ ನೀಡಿದ್ದಾರೆ ಕಂಗನಾ.