ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದ್ಯ ನೂತನ ಸಂಸದೆಯಾಗಿ ರಾಜಕೀಯದಲ್ಲಿ (Politics) ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಸುಲಭ, ರಾಜಕೀಯ ಕಷ್ಟವೆಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಮಾಲಿವುಡ್ ಸ್ಟಾರ್ ಮಮ್ಮುಟ್ಟಿ ಸಿನಿಮಾದಲ್ಲಿ ಸಮಂತಾ
ಲೋಕಸಭೆ ಚುನಾವಣೆಯಲ್ಲಿ ಮಂಡಿಯಲ್ಲಿ ಗೆದ್ದ ಕ್ವೀನ್ ಕಂಗನಾ ಇದೀಗ ನೂತನ ಸಂಸದೆಯಾಗಿ ಪಾಲಿಟಿಕ್ಸ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಸಿನಿಮಾ, ರಾಜಕೀಯ ಕೆಲಸಗಳ ಬಗ್ಗೆ ಮುಕ್ತವಾಗಿ ನಟಿ ಮಾತನಾಡಿದ್ದಾರೆ. ನನಗೆ ಇಷ್ಟ ಬಂದಿದ್ದನ್ನು ನಾನು ಮಾಡುತ್ತೇನೆ. ಚಿತ್ರೋದ್ಯಮದಲ್ಲಿ ನಟಿ. ಬರಹಗಾತಿ, ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇಲ್ಲಿನ ಜನರೊಂದಿಗೆ ನನ್ನನ್ನು ತೊಡಗಿಸಿಕೊಳ್ಳಬೇಕು. ರಾಜಕೀಯದಲ್ಲೇ ಮುಂದುವರೆಯುವ ಆಸೆಯಿದೆ ಎಂದು ನಟಿ ಮಾತನಾಡಿದ್ದಾರೆ.
ಹಾಗಂತ ನನ್ನ ಮೇಲೆ ಯಾವುದೇ ಒತ್ತಡವೂ ಇಲ್ಲ. ಆದರೂ ನನಗೆ ಅನಿಸಿದ ರೀತಿ ಸಿನಿಮಾದಲ್ಲಿ ನಟಿಯಾಗಿ ದುಡಿಯೋದು ರಾಜಕೀಯಕ್ಕಿಂತಲೂ ಸುಲಭ ಎಂದಿದ್ದಾರೆ. ರಾಜಕಾರಣ ವೈದ್ಯಕೀಯ ವೃತ್ತಿಯಂತೆ ಸ್ವಲ್ಪ ಕಷ್ಟಕರವಾಗಿದೆ ಎಂದಿದ್ದಾರೆ. ಆರೋಗ್ಯದಲ್ಲಿ ತೊಂದರೆಗೊಳಗಾದವರು ಮಾತ್ರ ನಿಮ್ಮ ಬಳಿ ಬರುತ್ತಾರೆ. ಆದರೆ ಸಿನಿಮಾ ನೋಡವವರಿಗೆ ಮನರಂಜನೆಯ ಜೊತೆ ರಿಲೀಫ್ ಕೂಡ ಸಿಗಲಿದೆ. ಆದರೆ ರಾಜಕೀಯ ಹಾಗಲ್ಲ ಎಂದು ನಟಿ ಮಾತನಾಡಿದ್ದಾರೆ.
ಅಂದಹಾಗೆ, ಕಂಗನಾ ನಟಿಸಿದ ‘ಎಮರ್ಜೆನ್ಸಿ’ (Emergency Film) ಸಿನಿಮಾ 2023ರಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಮುಂದಕ್ಕೆ ಹೋಗಿತ್ತು. ಇದೀಗ ‘ಎಮರ್ಜೆನ್ಸಿ’ ರಿಲೀಸ್ ಡೇಟ್ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ. ಮತ್ತೆ ಸಿನಿಮಾಗಳಲ್ಲಿ ನಟಿಸ್ತಾರಾ? ಇಲ್ವಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.