ರಾಘವ ಲಾರೆನ್ಸ್- ಕಂಗನಾ ರಾಣಾವತ್ (Kangana Ranaut) ನಟನೆಯ ‘ಚಂದ್ರಮುಖಿ-2’ (Chandramukhi 2) ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದೆ. ಗಣೇಶ್ ಚತುರ್ಥಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿರುವ ಈ ಚಿತ್ರದ ಟ್ರೈಲರ್, ಟೀಸರ್ ಭಾರೀ ಸದ್ದು ಮಾಡುತ್ತಿದೆ. ಹಿರಿಯ ನಟ ಪಿ.ವಾಸು ನಿರ್ದೇಶನದಲ್ಲಿ ಮೂಡಿಬಂದಿರುವ ಚಂದ್ರಮುಖಿ-2 ಸಿನಿಮಾದ ಆಡಿಯೋ ಲಾಂಚ್ ಇವೆಂಟ್ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿ ತಮ್ಮ ಅನುಭವ ಹಂಚಿಕೊಂಡಿದೆ.
Advertisement
ನಟ ರಾಘವ್ ಲಾರೆನ್ಸ್ (Raghava Lawrence) ಮಾತನಾಡಿ, ಹಲವು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡರು. ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುವ ಸುಭಾಸ್ಕ್ ಕರಣ್ ನನ್ನ ಜೊತೆ ಸಿನಿಮಾ ಮಾಡ್ತಾರಾ ಅಂತ ಆಶ್ಚರ್ಯ ಪಡ್ತಿದ್ದೆ? ಆದರೆ, ‘ಚಂದ್ರಮುಖಿ 2’ ಅಂತ ದೊಡ್ಡ ಸಿನಿಮಾ ಮಾಡಿದ್ರು. ಅವರ ಬ್ಯಾನರ್‌ನ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ನಮ್ಮ ನಿರ್ದೇಶಕ ವಾಸು ಸರ್ ಗೆ ನಾಲ್ಕು ದಶಕಗಳ ಅನುಭವವಿದೆ. ನಾನು ಸೈಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ ಕಾಲದಿಂದಲೂ ಅವರು ನಿರ್ದೇಶಕರಾಗಿ ಉತ್ತಮ ಚಿತ್ರಗಳನ್ನು ಮಾಡಿದ್ದಾರೆ. ಇದನ್ನೂ ಓದಿ:ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ
Advertisement
Advertisement
ಕಂಗನಾ ರಣಾವತ್ ಅವರು ಈ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದಾಗ ನನಗೆ ಆಶ್ಚರ್ಯವಾಯಿತು. ಕೀರವಾಣಿ ಬಗ್ಗೆ ಮಾತನಾಡಲು ಪದಗಳು ಸಾಕಾಗುವುದಿಲ್ಲ, ಅವರು ಎಂದಿಗೂ ಕೆಲಸದ ಬಗ್ಗೆ ಟೆನ್ಷನ್ ಆಗುವುದಿಲ್ಲ. ಈ ಚಿತ್ರದ ಸಮಯದಲ್ಲಿ ಅವರು ತಮ್ಮ ಕೆಲಸವನ್ನು ಆನಂದಿಸುತ್ತಾರೆ, ಅದಕ್ಕಾಗಿಯೇ ಅವರು ನಮ್ಮ ಚಿತ್ರಕ್ಕೆ ಉತ್ತಮ ಸಂಗೀತವನ್ನು ನೀಡಿದ್ದಾರೆ. ಛಾಯಾಗ್ರಾಹಕ ರಾಜಶೇಖರ್, ಕಲಾ ನಿರ್ದೇಶಕ ತೊಟ್ಟ ಥರಣಿ ಗಾರು, ಸಂಕಲನಕಾರ ಆಂಟನಿ ಅವರು ಇಡೀ ಚಿತ್ರತಂಡದೊಂದಿಗೆ ‘ಚಂದ್ರಮುಖಿ 2’ ನಂತಹ ಅದ್ಭುತ ಚಿತ್ರವನ್ನು ಮಾಡಿದ್ದಾರೆ. ಖಂಡಿತ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ ಎಂದರು.
Advertisement
ಬಾಲಿವುಡ್ ಕ್ವೀನ್ ಕಂಗನಾ ರಣಾವತ್, ನನ್ನ ನಟನಾ ವೃತ್ತಿಜೀವನದಲ್ಲಿ ನಾನು ‘ಚಂದ್ರಮುಖಿ 2’ ಚಿತ್ರ ಮಾಡಿಲ್ಲ. ಅಸಲಿ ವಿಷಯವೆಂದರೆ, ನಾನು ಯಾರನ್ನೂ ಆಫರ್ ಕೇಳಿಲ್ಲ. ಮೊದಲ ಬಾರಿಗೆ ನಾನು ನಿರ್ದೇಶಕ ಪಿ. ವಾಸು ಅವರನ್ನು ಕೇಳಿದೆ. ಈ ಚಿತ್ರದಲ್ಲಿ ವಾಸು ಅವರು ನನ್ನ ಪಾತ್ರದ ಜೊತೆಗೆ ಪ್ರತಿ ಪಾತ್ರಕ್ಕೂ ಸಮಾನ ಪ್ರಾಮುಖ್ಯತೆ ನೀಡಿದ್ದಾರೆ.ಇಡೀ ಕ್ರೆಡಿಟ್ ಅವರಿಗೆ ಸಲ್ಲುತ್ತದೆ.ಲಾರೆನ್ಸ್ ಮಾಸ್ಟರ್ ಅನೇಕರಿಗೆ ಸ್ಫೂರ್ತಿ ಎಂದರು.
ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ.ಕೀರವಾಣಿ ಮಾತನಾಡಿ, ಚಂದ್ರಮುಖಿ 2 (Chandramukhi 2) ಆಸ್ಕರ್ ಪ್ರಶಸ್ತಿ (Oscar Award)ಪಡೆದ ನಂತರ ನಾನು ಸಂಗೀತ ಸಂಯೋಜನೆ ಮಾಡಿರುವ ಚಿತ್ರ. ಇಂತಹ ಒಳ್ಳೆಯ ಅವಕಾಶ ನೀಡಿದ ನಿರ್ದೇಶಕ ಪಿ.ವಾಸು ಅವರಿಗೆ ಧನ್ಯವಾದಗಳು. ವಾಸು ಅವರು ಉತ್ತಮ ನಿರ್ದೇಶಕ ಮಾತ್ರವಲ್ಲದೆ. ಒಬ್ಬ ಒಳ್ಳೆಯ ಗಾಯಕ. ನನ್ನ ಮುಂದಿನ ಚಿತ್ರಕ್ಕೆ ಅವರು ಗಾಯಕನಾಗಲು ನಾನು ಬಯಸುತ್ತೇನೆ. ರಾಘವ ಲಾರೆನ್ಸ್ ಅವರ ಬೆಂಬಲದಿಂದ ಹಾಡುಗಳು ಚೆನ್ನಾಗಿ ಬಂದಿವೆ ಎಂದರು.
ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, RRR ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಪಡೆದ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ. ರಾಧಾ ಕೃಷ್ಣ ಎಂಟರ್ಟೈನ್ಮೆಂಟ್ ತೆಲುಗಿನಲ್ಲಿ ಚಂದ್ರಮುಖಿ-2 ಸಿನಿಮಾವನ್ನು ರಿಲೀಸ್ ಮಾಡಲಾಗಿದೆ.