ಕಾಂಗ್ರೆಸ್‌ಗೆ ಮತ ಹಾಕುವವರು ಕಳ್ಳರು: ಕಂಗನಾ ರಣಾವತ್‌

Public TV
1 Min Read
kanganaranaut 1

ನವದೆಹಲಿ: ನಾಸ್ತಿಕರನ್ನು ನಂಬಲು ಸಾಧ್ಯವಿಲ್ಲ. ಕಳ್ಳರು ಮಾತ್ರ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಬಾಲಿವುಡ್‌ ನಟಿ ಕಂಗನಾ ರಣಾವತ್‌ ಹೇಳಿದ್ದಾರೆ.

CongressFlags1 e1613454851608

ʻಜೀವನದ ನಾಲ್ಕು ನಿಯಮಗಳನ್ನು ನೆನಪಿಟ್ಟುಕೊಳ್ಳಿʼ ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 1.ಮೂರ್ಖರು ಮಾತ್ರ ಮೂರ್ಖರನ್ನು ಬೆಂಬಲಿಸುತ್ತಾರೆ. 2.ತನ್ನನ್ನೇ ನಂಬದವರಿಗೆ ದೇವರು ಮತ್ತು ನಂಬಿಕೆ ಮೇಲೆ ವಿಶ್ವಾಸವಿರುವುದಿಲ್ಲ. 3.ನಿಮ್ಮ ಅಂತರಂಗದ ಪ್ರತಿಬಿಂಬವಾಗಿರುವ ಗುರುವನ್ನು ನೀವು ಕಾಣುವಿರಿ. ನೀವು ಸತ್ಯವಂತರಾಗಿದ್ದರೆ ಸತ್ಯವಂತ ಗುರುಗಳನ್ನೇ ಅನುಸರಿಸುವಿರಿ. ನೀವು ಒಳ್ಳೆಯವರಾಗಿಲ್ಲದಿದ್ದರೆ, ವಂಚಕರನ್ನೇ ಗುರು ಎಂದು ಕಾಣುವಿರಿ. 3.ನೀವು ಕಳ್ಳರಾಗಿದ್ದರೆ ಕಾಂಗ್ರೆಸ್‌ನ್ನು ಬೆಂಬಲಿಸುವಿರಿ. ನೀವು ನಿಜವಾದ ರಾಷ್ಟ್ರವಾದಿಯಾಗಿದ್ದರೆ ಬಿಜೆಪಿಗೆ ಮತ ಹಾಕುವಿರಿ ಎಂದು ಕಂಗನಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶೂಟಿಂಗ್‍ಗಾಗಿ ರಾಜಮಂಡ್ರಿಗೆ ಬಂದಿಳಿದ ರಾಮ್ ಚರಣ್ – ಅಭಿಮಾನಿಗಳಿಂದ ನೂಕು ನುಗ್ಗಲು

kanganaranaut

ಕಂಗನಾ ರಣಾವತ್‌ ಹಿಂದಿನಿಂದಲೂ ಬಿಜೆಪಿ ಪರವಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಕಂಗನಾ ಭೇಟಿಯಾಗಿದ್ದರು. ಅವರ ಪೋಸ್ಟ್‌ಗಳು ಸಹ ಬಿಜೆಪಿ ಪರವಾಗಿವೆ.

kangana web

ಅಷ್ಟೇ ಅಲ್ಲದೆ ವಿವಾದಾತ್ಮಕ ಹೇಳಿಕೆಗಳ ಮೂಲಕವೂ ಕಂಗನಾ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಗಾಂಧೀಜಿ ಅವರ ಅಹಿಂಸಾವಾದವನ್ನು ಟೀಕಿಸಿ ವಿವಾದಕ್ಕೆ ಗುರಿಯಾಗಿದ್ದರು. ಇದನ್ನೂ ಓದಿ: ದೇಶದ ಭದ್ರತೆಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುತ್ತೇವೆ: ಕೇಜ್ರಿವಾಲ್‌

Share This Article
Leave a Comment

Leave a Reply

Your email address will not be published. Required fields are marked *