ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ (Kangana Ranaut) ಅವರು ಒಂದಲ್ಲಾ ಒಂದು ಸುದ್ದಿಯಿಂದ ಸೌಂಡ್ ಮಾಡುತ್ತಲೇ ಇರುತ್ತಾರೆ. ಇದೀಗ ದುಬಾರಿ ಬೆಲೆಯ ವ್ಯಾನಿಟಿ ವ್ಯಾನ್ (Vanity Van) ಖರೀದಿಸಿರುವ ಮೂಲಕ ನಟಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಕಂಗನಾ (Kangana) ಇತ್ತೀಚಿಗೆ ನಟಿಸಿದ ಸಾಲು ಸಾಲು ಸಿನಿಮಾಗಳು ಗಲ್ಲಾಪಟ್ಟಿಗೆಯಲ್ಲಿ ಸೋತಿದೆ. ಆದರೂ ಕಂಗನಾ ಇರುವ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಸದ್ಯ ವ್ಯಾನಿಟಿ ವ್ಯಾನ್ಗಾಗಿ ಕಂಗನಾ ರಣಾವತ್ ಅವರು ಬರೋಬ್ಬರಿ 65 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಸುದ್ದಿ ಆಗಿದೆ. ನಟ-ನಟಿಯರು, ಸ್ಟಾರ್ ನಿರ್ದೇಶಕರು ಶೂಟಿಂಗ್ ಸ್ಥಳದಲ್ಲಿ ವಿಶ್ರಾಂತಿ ಪಡೆಯಲು ಮತ್ತು ಮೇಕಪ್ ಮಾಡಿಕೊಳ್ಳಲು ಬಳಸುವ ವಾಹನಕ್ಕೆ ವ್ಯಾನಿಟಿ ವ್ಯಾನ್ ಎನ್ನುತ್ತಾರೆ. ಕಂಗನಾ ಅವರು ಬಳಸುವ ವ್ಯಾನಿಟಿ ವ್ಯಾನ್ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಅಪಾರ ಚಿನ್ನಾಭರಣ ದೋಚಿದ ಕಳ್ಳರು
ಪಕ್ಕಾ ಸಾಂಪ್ರದಾಯಿಕ (Traditional) ಶೈಲಿಯಲ್ಲಿ ಕಂಗನಾ ರಣಾವತ್ ಅವರ ವ್ಯಾನಿಟಿ ವ್ಯಾನ್ ಇದೆ. ಇದರ ಒಳಾಂಗಣ ವಿನ್ಯಾಸ ನೋಡಿದರೆ ಅವರ ಮನೆಯನ್ನು ನೋಡಿದಂತೆ ಆಗುತ್ತದೆ. ಮರದ ಕೆತ್ತನೆಗಳನ್ನು ಹೊಂದಿರುವ ಸೋಫಾ ಮತ್ತು ಕುರ್ಚಿಗಳು ಈ ವಾಹನದಲ್ಲಿವೆ. ಶೂಟಿಂಗ್ಗೆ ತೆರಳಿದಾಗಲೂ ಕೂಡ ಮನೆಯಲ್ಲಿ ಇರುವಂತಹ ಕಂಫರ್ಟ್ ಸಿಗಬೇಕು ಎಂಬ ಉದ್ದೇಶದಿಂದ ಈ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಕಂಗನಾ ಅವರು ಈಗ `ಎಮರ್ಜೆನ್ಸಿ’ (Emergency) ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ಅವರೇ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಇಂದಿರಾ ಗಾಂಧಿಯ ಪಾತ್ರಕ್ಕೆ ಕಂಗನಾ ಬಣ್ಣ ಹಚ್ಚಿದ್ದು, ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ.