ನಿಮಗೆ ಸೆಕ್ಸ್ ಬೇಕೆಂದರೆ ಮಾಡಿಬಿಡಿ, ಸುಮ್ಮನೆ ಕೊರಗುತ್ತಿರಬೇಡಿ: ನಟಿ ಕಂಗನಾ

Public TV
1 Min Read
kangana 1

ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ನಿಮಗೆ ಸೆಕ್ಸ್ ಬೇಕೆಂದರೆ ಮಾಡಿಬಿಡಿ, ಸುಮ್ಮನೆ ಕೊರಗುತ್ತಿರಬೇಡಿ ಎಂದು ಹೇಳಿಕೆಯೊಂದನ್ನು ನೀಡಿದ್ದಾರೆ.

ಇತ್ತೀಚೆಗೆ ಕಂಗನಾ ಅವರು ಖಾಸಗಿ ವಾಹಿನಿಯಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಕಂಗನಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ, ತಮ್ಮ ಮೊದಲ ಕ್ರಶ್ ಹಾಗೂ ಮೊದಲ ರಿಲೇಷನ್‍ಶಿಪ್ ಬಗ್ಗೆ ರಿವೀಲ್ ಮಾಡಿದ್ದಾರೆ. ಇದೇ ವೇಳೆ ನಿಮಗೆ ಸೆಕ್ಸ್ ಬೇಕೆಂದರೆ ಮಾಡಿಬಿಡಿ, ಸುಮ್ಮನೆ ಕೊರಗುತ್ತಿರಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್ ಮೂಲಕ ಗೆಳೆಯನ ಹುಡುಕಾಟದಲ್ಲಿದ್ದಾರೆ 83ರ ವೃದ್ಧೆ

kangana

ಕಾರ್ಯಕ್ರಮದಲ್ಲಿ ಮಾತನಾಡಿದ ಕಂಗನಾ, “ಪ್ರತಿಯೊಬ್ಬರ ಜೀವನದಲ್ಲೂ ಸೆಕ್ಸ್ ಒಂದು ಪ್ರಮುಖ ಅಂಶವಾಗಿದೆ. ನಿಮಗೆ ಸೆಕ್ಸ್ ಬೇಕೆಂದರೆ ಮಾಡಿಬಿಡಿ, ಸುಮ್ಮನೆ ಕೊರಗುತ್ತಾ ಕೂರಬೇಡಿ ಒಂದು ಕಾಲದಲ್ಲಿ ನಿಮಗೆ ಮದುವೆ ಮಾಡಿಕೋ ಎಂದು ಹೇಳುತ್ತಿದ್ದರು. ಅಲ್ಲದೆ ನಿಮ್ಮ ಭಾವನೆಗಳನ್ನು ಆ ವ್ಯಕ್ತಿ ಜೊತೆಗೆ ಹಂಚಿಕೊಳ್ಳಿ ಎಂದು ಹೇಳಲಾಗುತ್ತಿತ್ತು” ಎಂದು ಹೇಳಿದ್ದಾರೆ.

kangana ranuat 4

ನಮ್ಮ ಶಾಸ್ತ್ರಗಳು ಲೈಂಗಿಕತೆಗೆ ಅನುಮತಿಯನ್ನು ನೀಡುವುದಿಲ್ಲ. ಮಕ್ಕಳು ಲೈಂಗಿಕವಾಗಿರುವುದರಿಂದ ಸಂತೋಷವಾಗಿರಬೇಕು. ಮಕ್ಕಳು ಜವಾಬ್ದಾರಿಯುತ ಲೈಂಗಿಕತೆಯನ್ನು ಹೊಂದಬೇಕು. ನಾನು ಲೈಂಗಿಕವಾಗಿ ಸಕ್ರಿಯನಾಗಿದ್ದೇನೆ ಎಂದು ತಿಳಿದಾಗ ನನ್ನ ಪೋಷಕರು ಆಘಾತಕ್ಕೊಳಗಾಗಿದ್ದರು. ಪೋಷಕರು ಮಕ್ಕಳನ್ನು ಲೈಂಗಿಕವಾಗಿ ಪ್ರೋತ್ಸಾಹಿಸಬೇಕು ಎಂದರು ಎಂದು ತಿಳಿಸಿದ್ದಾರೆ.

ಕಂಗನಾ ಅವರು ಕೊನೆಯದಾಗಿ ‘ಮಣಿಕರ್ಣಿಕಾ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು. ಸದ್ಯ ಕಂಗನಾ ಈಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿಎಂ ಜಯಾಲಲಿತಾ ಅವರ ಜೀವನಚರಿತ್ರೆಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಎ.ಎಲ್ ವಿಜಯ್ ಅವರು ನಿರ್ದೇಶಿಸಿದ್ದಾರೆ.

Share This Article