ತನ್ನ ಖಾಸಗಿ ವಿಚಾರವಾಗಿ ಯಾವುದನ್ನೂ ಮುಚ್ಚಿಟ್ಟುಕೊಂಡಿಲ್ಲ ಬಾಲಿವುಡ್ ನಟ ಕಂಗನಾ ರಣಾವತ್ (Kangana Ranaut), ತನ್ನ ಸಿನಿಮಾಗಳಾಚೆಯೂ ಅವರು ಬೋಲ್ಡ್ ಆಗಿ ಮಾತನಾಡಿದ್ದಾರೆ. ಅದರಲ್ಲೂ ಪ್ರೀತಿ, ಪ್ರೇಮ, ಡೇಟಿಂಗ್, ಸೆಕ್ಸ್ ಹೀಗೆ ಯಾವುದನ್ನೂ ಉಳಿಸಿಲ್ಲ. ಎಲ್ಲವೂ ಖುಲಂಖುಲ್ಲಾ. ಇಂತಹ ಬೋಲ್ಡ್ ನಟಿ ತನ್ನ ವಿಚಿತ್ರ ಬಯಕೆಯೊಂದನ್ನು ಹೇಳಿಕೊಂಡಿದ್ದಾರೆ. ಆದರೆ, ಅದು ಭಯಾನಕ ಆಗಿದೆ ಎನ್ನುವುದು ದುರಂತ.
ಕಂಗನಾ ರಣಾವತ್ ಬಾಲಿವುಡ್ (Bollywood) ನ ಅನೇಕ ನಟರ ಜೊತೆ ಡೇಟಿಂಗ್ (Dating) ಮಾಡಿದ್ದಾರೆ. ಯಾರೆಲ್ಲ ತಮಗೆ ಮೋಸ ಮಾಡಿದ್ದಾರೆ ಎನ್ನುವುದನ್ನೂ ಹೇಳಿಕೊಂಡಿದ್ದಾರೆ. 16ನೇ ವಯಸ್ಸಿನಲ್ಲೇ ಶುರುವಾದ ಪ್ರೀತಿ-ಪ್ರೇಮಕ್ಕೆ ಈವರೆಗೂ ಅವರು ಲೆಕ್ಕವಿಟ್ಟಿಲ್ಲವಂತೆ. ಆದರೆ, ಅವರಾಗಿಯೇ ಯಾರಿಗೂ ಕೈಕೊಟ್ಟಿಲ್ಲವಂತೆ. ಇದೀಗ ಪ್ರೀತಿ ಮಾಡಿ ತಾನೇ ಯಾರಿಗಾದರೂ ಕೈ ಕೊಡಬೇಕು ಅನಿಸುತ್ತಿದೆಯಂತೆ. ಇದನ್ನೂ ಓದಿ:ಮಗಳ ವಯಸ್ಸಿನ ನಟಿ ಜೊತೆ ಅನಿಲ್ ಕಪೂರ್ ಲಿಪ್‌ಲಾಕ್- ನೆಟ್ಟಿಗರಿಂದ ಛೀಮಾರಿ
ನಾನು ಒಬ್ಬರ ಜೊತೆ ನಿಯತ್ತಾಗಿ ಕಮಿಟ್ ಆಗಿರುತ್ತಿದ್ದೆ. ಅವರು ನನಗೆ ಮೋಸ ಮಾಡಿ ಕೈ ಕೊಡುತ್ತಿದ್ದರು. ಮತ್ತೆ ಅವರು ನನ್ನ ಹತ್ತಿರಕ್ಕೆ ಬರುವ ಹೊತ್ತಿನಲ್ಲಿ ಮತ್ತೊಬ್ಬರ ಜೊತೆ ನಾನು ಕಮಿಟ್ ಆಗಿರುತ್ತಿದ್ದೆ. ನಾನು ಯಾರಿಗೂ ಈ ವಿಷಯದಲ್ಲಿ ನೋವು ಮಾಡಲಿಲ್ಲ. ನನಗೆ ಎಲ್ಲರೂ ತೊಂದರೆ ಕೊಟ್ಟರು. ನಾನೀಗ ಈ ವಿಷಯದಲ್ಲಿ ಯಾರಿಗಾದರೂ ಮೋಸ ಮಾಡಬೇಕು, ನೋವು ಮಾಡಬೇಕು ಎಂದು ಅನಿಸಿದೆ ಎಂದು ಹೇಳಿಕೊಂಡಿದ್ದಾರೆ.
ಸದ್ಯ ಕಂಗನಾ ತಮ್ಮದೇ ನಿರ್ದೇಶನ ಹಾಗೂ ನಿರ್ಮಾಣದ ಎಮರ್ಜನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ನಟಿಸುವುದರ ಜೊತೆಗೆ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಕೂಡ ಸಿದ್ಧವಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]