ಮುಂಬೈ: ನಟಿ ತುನಿಷಾ ಶರ್ಮಾ (Tunisha Sharma) ಅವರ ಸಾವಿನ ಪ್ರಕರಣದಲ್ಲಿ ಈಗಾಗಲೇ ಅನೇಕ ರೋಚಕ ಸತ್ಯಗಳು ಹೊರಬಿದ್ದಿವೆ. ತನಿಖೆ ನಡೆಯುವ ಸಂದರ್ಭದಲ್ಲಿ ತುನಿಷಾ ಗರ್ಭಿಣಿ (Pregnant Women) ಎಂದು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಗರ್ಭಿಣಿ ಆಗಿರಲಿಲ್ಲ ಎಂದು ಸಾಬೀತಾಯಿತು. ಈ ಕುರಿತು ಮತ್ತೆ ತುನಿಷಾ ಸ್ನೇಹಿತೆ ರಯ್ಯಾ ಲಬೀಬ್ ಅಚ್ಚರಿಯ ಹೇಳಿಕೆ ನೀಡಿದ್ದು, ಆಕೆ ಗರ್ಭಿಣಿಯಾಗಿದ್ದು ನಿಜ. ಅಬಾರ್ಷನ್ ಮಾಡಿಸಿಕೊಂಡಿದ್ದಳು ಎಂದು ಹೇಳಿಕೆ ನೀಡಿದ್ದ.
ನಟಿ ತುನಿಷಾ ಶರ್ಮಾ ಆತ್ಮಹತ್ಯೆ (Suicide) ಮಾಡಿಕೊಳ್ಳುವ ಹದಿನೈದು ದಿನ ಮುನ್ನ ಬಾಯ್ ಫ್ರೆಂಡ್ ಶಿಜಾನ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಳು ಎಂದು ಹೇಳಲಾಗಿದ್ದು, ಈ ಲವ್ ಬ್ರೇಕ್ ಅಪ್ ಗೆ ಕಾರಣ ಲವ್ ಜಿಹಾದ್ (Love Jihad) ಭಯ ಮತ್ತು ಶ್ರದ್ಧಾ ವಾಕರ್ ಕೊಲೆಯಿಂದ ಬೇಸತ್ತು ದೂರವಾಗಿದ್ದನು ಎಂದು ಹೇಳಿಕೊಂಡಿದ್ದ. ಈ ಪ್ರಕರಣದ ಕುರಿತಾಗಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಹಲವೆಡೆ ಸ್ಫೋಟ – 5 ಸಾವು, 10 ಮಂದಿಗೆ ಗಾಯ
ಈ ಬೆನ್ನಲ್ಲೇ ನಟಿ ಕಂಗನಾ ರಣಾವತ್ (Kangana Ranaut) ಸಹ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಭಾವುಕ ಪೋಸ್ಟ್ ವೊಂದನ್ನು ಬರೆದುಕೊಂಡಿದ್ದಾರೆ. `ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಎಂದಿಗೂ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ನಿಭಾಯಿಸಲು ಸಾಧ್ಯವಿಲ್ಲ. ನಾನು ಗೌರವಾನ್ವಿತ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಕೃಷ್ಣ ದ್ರೌಪದಿಗೆ ಸಹಾಯ ಮಾಡಿದಂತೆ, ನಾವು ನಿಮ್ಮಲ್ಲಿ ಒಪ್ಪಿಗೆ ಇಲ್ಲದ ಬಹುಪತ್ನಿತ್ವ ವಿರುದ್ಧ ಬಲವಾದ ಕಾನೂನು ಮಾಡುತ್ತೀರಿ ಎಂದು ನಿರೀಕ್ಷೆ ಇಟ್ಟಿದ್ದೀವಿ. ಮಹಿಳೆಯರ ಮೇಲೆ ಆ ಸಿಡ್ ದಾಳಿ, ಮಹಿಳೆಯನ್ನು ಅನೇಕ ತುಂಡು ತುಂಡುಗಳಾಗಿ ಕತ್ತರಿಸುವುದು ಇಂತವರಿಗೆ ತಕ್ಷಣ ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ 20 ವರ್ಷದ ತುನಿಷಾ ಶರ್ಮಾ ಶೂಟಿಂಗ್ ಸೆಟ್‌ನಲ್ಲೇ ಮೇಕಪ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಬಳಿಕ ಆಕೆಯ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣ ಈಗ ಲವ್ ಜಿಹಾದ್ ಆಯಾಮ ಪಡೆದುಕೊಳ್ಳುತ್ತಿದೆ. ಈ ನಡುವೆ ಕಂಗನಾ ಟ್ವೀಟ್ ವೈರಲ್ ಆಗಿದೆ. ಇದನ್ನೂ ಓದಿ: ‘ಲವ್ ಜಿಹಾದ್’ ಗೆ ಹೆದರಿಕೊಂಡು ತುನಿಷಾ ಶರ್ಮಾಳಿಂದ ದೂರವಾಗಿದ್ದ ಬಾಯ್ ಫ್ರೆಂಡ್