ಬಾಲಿವುಡ್ ಬ್ಯೂಟಿ ಕಂಗನಾ ರಣಾವತ್ ಮತ್ತೆ ಬಯೋಪಿಕ್ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇಂದಿರಾ ಗಾಂಧಿಯಾಗಿ ನಟಿ ಕಂಗನಾ ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಕೂಡ ರಿವೀಲ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ.
View this post on Instagram
ನಟಿ ಕಂಗನಾ ಅದ್ಯಾಕೋ ಬಯೋಪಿಕ್ ಸಿನಿಮಾದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಕಳೆದ ಬಾರಿ ತಮಿಳುನಾಡಿನ ತಲೈವಿ ಜಯಲಲಿತಾ ಬಯೋಪಿಕ್ ಮೂಲಕ ಸದ್ದು ಮಾಡಿದ್ದ ನಟಿ, ಈಗ ಇಂದಿರಾ ಗಾಂಧಿ ಪಾತ್ರದ ಮೂಲಕ ಬಿಟೌನ್‌ನಲ್ಲಿ ಸೌಂಡ್ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಬಯೋಪಿಕ್‌ನಲ್ಲಿ ಇಂದಿರಾ ಗಾಂಧಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಥೇಟ್ ಇಂದಿರಾ ಗಾಂಧಿಯಂತೆಯೇ ಕಂಗನಾ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್
View this post on Instagram
ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿನ ಕಥೆ ಏದುರಿಸಿದ ಸವಾಲುಗಳನ್ನ ತೆರೆಯ ಮೇಲೆ ತೋರಿಸಲು ಸಜ್ಜಾಗಿದ್ದಾರೆ. `ಎಮರ್ಜೆನ್ಸಿ’ ಚಿತ್ರದ ಟೈಟಲ್ ಮೂಲಕ ಕಂಗನಾ ಫಸ್ಟ್ ಲುಕ್ ರಿವೀಲ್ ಮಾಡಿದ್ದು, ಸೇಮ್ ಟು ಸೇಮ್ ಇಂದಿರಾ ಗಾಂಧಿಯಂತೆ ಮಿಂಚಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಈ ಚಿತ್ರವನ್ನ ನಟಿ ಕಂಗನಾ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ರೇಣು ಪಿಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.
ಸದ್ಯ ಜಯಲಲಿತಾ ಬಯೋಪಿಕ್ ನಂತರ ಇಂದಿರಾ ಗಾಂಧಿಯ ರೂಪದಲ್ಲಿ ಬಂದಿರುವ ಕಂಗನಾ ಲುಕ್ ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಕಂಗನಾ ಈ ಚಿತ್ರದ ಫಸ್ಟ್ ಲುಕ್‌ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.