ನವದೆಹಲಿ: ಸದಾ ಸುದ್ದಿಯಲ್ಲಿರುವ ಬಾಲಿವುಡ್ (Bollywood) ತಾರೆ ಕಂಗನಾ ರಣಾವತ್ (Kangana Ranaut) ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಕಂಗನಾ ರಾಜಕೀಯಕ್ಕೆ ಎಂಟ್ರಿ ಕೊಡೋ ಸುಳಿವು ನೀಡುತ್ತಿದ್ದಂತೆ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ನಡ್ಡಾ (JP Nadda) ಬಿಜೆಪಿ ಪಕ್ಷ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಬಾಲಿವುಡ್ ನಟರು (Bollywood Actress) ಬಿಜೆಪಿ ಪಕ್ಷ ಸೇರಲು ಸ್ವಾಗತಾರ್ಹ, ಆದರೆ ಸಮಾಲೋಚನೆ ನಡೆಸಿದ ಬಳಿಕ ಚುನಾವಣೆಯಲ್ಲಿ (Elections) ಸ್ಪರ್ಧಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಭಾಗವಹಿಸುವಿಕೆ ಬಯಸಿದ್ರೆ ರಾಜಕೀಯಕ್ಕೆ ಬರುವೆ – ಕಂಗನಾ ಬಿಗ್ ಸ್ಟೇಟ್‌ಮೆಂಟ್
Advertisement
Advertisement
ನಿನ್ನೆಯಷ್ಟೇ ನಟಿ ಕಂಗನಾ ರಣಾವತ್ (Kangana Ranaut), ಪರಿಸ್ಥಿತಿ ಏನೇ ಇರಲಿ, ಸರ್ಕಾರ ನನ್ನ ಭಾಗವಹಿಸುವಿಕೆ ಬಯಸಿದ್ರೆ ನಾನು ರಾಜಕೀಯಕ್ಕೆ ಬರುತ್ತೇನೆ. ಹಿಮಾಚಲ ಪ್ರದೇಶದ (Himachal Pradesh) ಜನರು ತಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿದರೆ, ಅದು ನನ್ನ ಸೌಭಾಗ್ಯ. ನನ್ನ ಅದೃಷ್ಟ ಅಂದುಕೊಳ್ಳುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಆಲಿಯಾ ಭಟ್ ಡೆಲಿವರಿ ಡೇಟ್ ಫಿಕ್ಸ್: ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ರಾ ನಟಿ?
Advertisement
Advertisement
ಇದಕ್ಕೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಜೆ.ಪಿ ನಡ್ಡಾ (JP Nadda), ಕಂಗನಾ ರಣಾವತ್ ಪಕ್ಷಕ್ಕೆ ಸೇರಲು ಸ್ವಾಗತಾರ್ಹವಿದೆ. ಪಕ್ಷದೊಂದಿಗೆ ಕೆಲಸ ಮಾಡಲು ಬಯಸುವವರಿಗೆ ಸಾಕಷ್ಟು ಸ್ಥಳವಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ನಿರ್ಧಾರವಲ್ಲ, ತಳಮಟ್ಟದಿಂದ ಸಮಾಲೋಚನೆ ಪ್ರಕ್ರಿಯೆ ಇದೆ. ಚುನಾವಣಾ ಸಮಿತಿಯಿಂದ ಸಂಸದೀಯ ಮಂಡಳಿ ವರೆಗೆ ಸಮಾಲೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎಲ್ಲರಿಗೂ ಬಿಜೆಪಿ (BJP) ಸೇರಲು ಸ್ವಾಗತ. ಯಾರಿಗೂ ಷರತ್ತುಗಳ ಆಧಾರ ಮೇಲೆ ತೆಗೆದಕೊಳ್ಳುವುದಿಲ್ಲ. ಪಕ್ಷ ಸೇರಿದ ನಂತರ ಅವರ ಸಾಮರ್ಥ್ಯ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.