‘ತಲೈವಿ’ ಪಾತ್ರಕ್ಕೆ 6 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ – ಮಾತ್ರೆ ತಿಂದ ಕಥೆ ಬಿಚ್ಚಿಟ್ಟ ನಟಿ

Public TV
2 Min Read
Kangana

ಮುಂಬೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರಕ್ಕಾಗಿ ನಟಿ ಕಂಗನಾ ಮಾತ್ರೆಗಳನ್ನು ಸೇವಿಸಿ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಲೇಡಿ ಸೂಪರ್ ಸ್ಟಾರ್ ಜಯಲಲಿತಾ ರವರ ಜೀವನಚರಿತ್ರೆ ಕುರಿತು ಎರಡು ಸಿನಿಮಾಗಳು ಕಾಲಿವುಡ್ ಮತ್ತು ಬಾಲಿವುಡ್‍ನಲ್ಲಿ ತಯಾರಾಗುತ್ತಿವೆ. ಬಾಲಿವುಡ್‍ನಲ್ಲಿ ಜಯಲಲಿತಾ ಆಗಿ ನಟಿ ಕಂಗನಾ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಜಯಲಲಿತಾ ಆಗಿ ಕಂಗನಾ ಹೇಗೆ ಕಾಣುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ಇತ್ತೀಚೆಗೆ ‘ತಲೈವಿ’ ಚಿತ್ರದ ಫಸ್ಟ್‌ಲುಕ್‌ ಟೀಸರ್ ಬಿಡುಗಡೆಯಾಗಿದ್ದು, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ನಟಿ ಕಂಗನಾ ‘ತಲೈವಿ’ ಚಿತ್ರಕ್ಕಾಗಿ ತಾವು ಮಾಡಿಕೊಂಡಿರುವ ತಯಾರಿ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

thalaivi1 112319061709

ತೆರೆಮೇಲೆ ಜಯಲಲಿತಾ ಅವರಂತೆ ಕಾಣಲು ನಾನು ತುಂಬಾ ಕಷ್ಟ ಪಟ್ಟಿದ್ದೇನೆ. ಅದಕ್ಕಾಗಿ ಆರು ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದೇನೆ. ಅದರಲ್ಲೂ ಸೊಂಟ ಮತ್ತು ತೊಡೆ ಭಾಗದಲ್ಲಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಹೀಗಾಗಿ ನಾನು ಹಾರ್ಮೋನ್ ಮಾತ್ರೆಗಳನ್ನು ಸೇವಿಸಿದ್ದೇನೆ. ನಾನು ಎತ್ತರ ಮತ್ತು ಸಣ್ಣ ಇರುವುದರಿಂದ ನನ್ನ ಮುಖವು ದುಂಡಾಗಿರಲಿಲ್ಲ. ಆದರೆ ಜಯಲಲಿತಾ ಅವರು ಮುಖ ದುಂಡಗಿತ್ತು. ಹೀಗಾಗಿ ಅತೀ ಹೆಚ್ಚಿನ ಆಹಾರವನ್ನು ಸೇವನೆ ಮಾಡುತ್ತಿದ್ದೆ. ಜೊತೆಗೆ ತೂಕ ಹೆಚ್ಚಿಸಿಕೊಳ್ಳಲು ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ನಟರು ಸಿನಿಮಾಗಾಗಿ ತಮ್ಮ ಸ್ಟೈಲ್ ಬದಲಾಯಿಸಿಕೊಳ್ಳುತ್ತಾರೆ. ಆದರೆ ಯಾರೂ ಕೂಡ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ನಿರ್ದೇಶಕರಾದ ವಿಜಯ್ ಅವರು ಸಾಧ್ಯವಾದಷ್ಟು ಜಯಲಲಿತಾ ಅವರನ್ನು ಹೋಲುವಂತೆ ನಾನು ಆಗಬೇಕೆಂದುಕೊಂಡಿದ್ದರು. ಆದರೆ ಜಯಲಲಿತಾ ಅವರು ದೈಹಿಕವಾಗಿ ದಪ್ಪವಾಗಿದ್ದರು. ಮೇಕಪ್ ಮೂಲಕ ನನ್ನ ಮುಖ ದಪ್ಪ ಕಾಣಲು ಸಾಧ್ಯವಾಯಿತು. ನನ್ನ ದೇಹದ ಹಲವೆಡೆ ಪ್ಯಾಡ್‍ಗಳನ್ನು ಬಳಸಿ ಜಯಲಲಿತಾ ಲುಕ್ ಫೈನಲ್ ಮಾಡಿದ್ದೇವೆ ಎಂದರು.

kangana ranuat

ಫಸ್ಟ್‌ಲುಕ್‌ನಲ್ಲಿ ಹಸಿರು ಸೀರೆ ಮತ್ತು ಹಸಿರು ಮೇಲಂಗಿ ತೊಟ್ಟು ಕಂಗನಾ ರನೌತ್ ಗೆಲುವಿನ ಸಂಕೇತವನ್ನು ತೋರಿಸುತ್ತಿದ್ದಾರೆ. ಕಂಗನಾ ಅವರು ಫಸ್ಟ್‌ಲುಕ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಕಂಗನಾ ನೋಟವನ್ನು ಇಷ್ಟಪಟ್ಟರೆ ಇನ್ನು ಕೆಲವರು ಜಯಲಲಿತಾ ಅವರಿಗೂ ಕಂಗನಾ ರನೌತ್ ಪಾತ್ರಕ್ಕೂ ಹೋಲಿಕೆಯಾಗುವುದೇ ಇಲ್ಲ. ಆನಿಮೇಟೆಡ್ ಬೊಂಬೆ ತರಹ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.

‘ತಲೈವಿ’ ಸಿನಿಮಾವನ್ನು ಎ.ಎಲ್ ವಿಜಯ್ ಅವರು ನಿರ್ದೇಶನ ಮಾಡುತ್ತಿದ್ದು, ವಿಷ್ಣುವರ್ಧನ್ ಇದುರೈ ಮತ್ತು ಶೈಲೇಶ್ ಆರ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಮುಂದಿನ ವರ್ಷ ಬಿಡುಗಡೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *