ಮುಂಬೈ: ತನಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೊಲೆ ಬೆದರಿಕೆ ಸಂಬಂಧ ದಾಖಲಿಸಿರುವ ದೂರಿಗೆ ಸಂಬಂಧಿಸಿದ ಎಫ್‌ಐಆರ್ ಪ್ರತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಂಗನಾ, ಮುಂಬೈನಲ್ಲಿ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದವರನ್ನು ಸ್ಮರಿಸಿದ್ದಾರೆ. ಇದನ್ನೂ ಓದಿ: #MeToo ಪ್ರಕರಣ – ಧರ್ಮೋ ರಕ್ಷತಿ ರಕ್ಷಿತಃ ಎಂದ ಧ್ರುವ, ಜಂಟಲ್ ಮ್ಯಾನ್ ಅಂದ ಮೇಘನಾ
ಹಿಂದಿಯಲ್ಲಿ ಬರೆದುಕೊಂಡಿರುವ ಅವರು, ದೇಶದ್ರೋಹಿಗಳನ್ನು ಮೆರೆಯಬಾರದು ಮತ್ತು ಕ್ಷಮಿಸಲೂಬಾರದು. ಹಣ, ಅಧಿಕಾರ ಗಳಿಸುವ ಹಾಗೂ ಭಾರತಕ್ಕೆ ಕಳಂಕ ತರಲು ಸಿಗುವ ಒಂದು ಅವಕಾಶವನ್ನೂ ದೇಶದ್ರೋಹಿಗಳು ಕಳೆದುಕೊಳ್ಳುವುದಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಶುಭಾ ಪೂಂಜಾ ನ್ಯೂ ಹೇರ್ ಸ್ಟೈಲ್‍ಗೆ ದಿವ್ಯಾ ಕಾಮೆಂಟ್
ನನಗೆ ಕೆಲವರಿಂದ ಕೊಲೆ ಬೆದರಿಕೆ ಕರೆಗಳು ಬಂದಿವೆ. ಬಟಿಂಡಾದ ಸಹೋದರನೊಬ್ಬ ನನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ದೇಶದ ವಿರುದ್ಧ ಪಿತೂರಿ ನಡೆಸುವ ಹಾಗೂ ಉಗ್ರರ ಪಡೆಗಳ ವಿರುದ್ಧ ನಾನು ಸದಾ ಮಾತನಾಡುತ್ತೇನೆ. 80 ರ ದಶಕದಲ್ಲಿ ಪಂಜಾಬ್‌ನಲ್ಲಿ ಗುರುಗಳ ಪುಣ್ಯಭೂಮಿಯನ್ನು ನಾಶಗೊಳಿಸಿ ಖಲಿಸ್ತಾನ ಮಾಡುವ ಕನಸು ಕಾಣುತ್ತಿರುವ ನಕ್ಸಲರಿರಲಿ, ತುಕ್ಡೆ ತುಕ್ಡೆ ಗ್ಯಾಂಗ್‌ಗಳಿರಲಿ, ವಿದೇಶದಲ್ಲಿ ಕುಳಿತಿರುವ ಉಗ್ರರಿರಲಿ. ಅವರ ವಿರುದ್ಧ ನಾನು ದನಿಯೆತ್ತುತ್ತೇನೆ ಎಂದು ಕಂಗನಾ ಹೇಳಿದ್ದಾರೆ.
View this post on Instagram
ಪ್ರಜಾಪ್ರಭುತ್ವವೇ ನಮ್ಮ ದೇಶದ ಬಹುದೊಡ್ಡ ಶಕ್ತಿ. ಸರ್ಕಾರ ಯಾವುದೇ ಪಕ್ಷದ್ದಾಗಿರಲಿ. ಆದರೆ ನಾಗರಿಕರ ಸಮಗ್ರತೆ, ಏಕತೆ, ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ವಿಚಾರಗಳನ್ನು ಅಭಿವ್ಯಕ್ತಿಸುವ ಹಕ್ಕನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನಮಗೆ ನೀಡಿದೆ ಎಂದು ತಿಳಿಸಿದ್ದಾರೆ.