ದುಡ್ಡಿಗಾಗಿ ಮದುವೆಯಲ್ಲಿ ಕುಣಿಯುವವರನ್ನು ತಿವಿದ ಕಂಗನಾ ರಣಾವತ್

Public TV
1 Min Read
kangana ranaut dhaakad 2

ಖಾಸಗಿ ಸಮಾರಂಭಗಳಲ್ಲಿ ದುಡ್ಡಿಗಾಗಿ ಡ್ಯಾನ್ಸ್ ಮಾಡುವ ಸಾಕಷ್ಟು ಕಲಾವಿದರು ಇದ್ದಾರೆ. ಮದುವೆ, ಬರ್ತಡೇ ಪಾರ್ಟಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ನಟ ನಟಿಯರು ದುಡ್ಡು ಪಡೆದು ನೃತ್ಯ ಮಾಡುತ್ತಾರೆ. ಆದರೆ, ನಾನು ಯಾವತ್ತೂ ಆ ರೀತಿಯಲ್ಲಿ ಡ್ಯಾನ್ಸ್ (Dance) ಮಾಡಿಲ್ಲ ಎಂದು ಕಂಗನಾ ರಣಾವತ್ (Kangana Ranaut) ಹೇಳಿಕೊಂಡಿದ್ದಾರೆ. ಆ ರೀತಿಯಲ್ಲಿ ಕುಣಿಯುವ ಕಲಾವಿದರಿಗೆ ಅವರು ಟಾಂಗ್ ಕೊಟ್ಟಿದ್ದಾರೆ.

Kangana 3

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರ ವಿಡಿಯೋವನ್ನು ಶೇರ್ ಮಾಡಿರುವ ಕಂಗನಾ, ತಮ್ಮ ನೆಚ್ಚಿನ ಲತಾ ಅವರ ಬಗ್ಗೆ ಕೆಲವು ಸಾಲುಗಳನ್ನೂ ಅವರು ಬರೆದಿದ್ದಾರೆ. ಖಾಸಗಿ ಸಮಾರಂಭವೊಂದರಲ್ಲಿ ಲತಾ ಅವರಿಗೆ ಹಾಡಲು ಕೇಳಿಕೊಳ್ಳಲಾಗಿತ್ತು. ಆ ಹಾಡಿಗೆ ದೊಡ್ಡಮೊತ್ತದಲ್ಲೇ ಹಣ ನೀಡುವುದಾಗಿಯೂ ಆಯೋಜಕರು ಹೇಳಿದ್ದರು. ಆದರೆ, ಹಾಡಲು ಲತಾ ನಿರಾಕರಿಸಿದರಂತೆ. ದುಡ್ಡಿಗಾಗಿ ನಾನು ಹಾಡಲಾರೆ ಎಂದು ಹೇಳಿದ್ದರಂತೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

kangana ranaut 2

ಲತಾ ಅವರ ಮಾತುಗಳನ್ನು ಉಲ್ಲೇಖ ಮಾಡಿರುವ ಕಂಗನಾ, ನನಗೆ ಲತಾ ಅವರು ಯಾವತ್ತಿಗೂ ಆದರ್ಶ. ಅವರ ಮಾತನ್ನು ಒಪ್ಪುತ್ತೇನೆ ಮತ್ತು ಪಾಲಿಸಿಕೊಂಡು ಬಂದಿದ್ದೇನೆ ಎಂದಿರುವ ಕಂಗನಾ, ಈವರೆಗೂ ಅವರು ಯಾವತ್ತೂ ಹಣಕ್ಕಾಗಿ ಮದುವೆಯಲ್ಲ, ಪಾರ್ಟಿಯಲ್ಲಿ ಬರ್ತಡೇ ಸಮಾರಂಭದಲ್ಲಿ ನೃತ್ಯ ಮಾಡಿಲ್ಲವೆಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ನೃತ್ಯ ಮಾಡುವವರಿಗೆ ತಿವಿದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *