ತೆಲುಗು ನೆಲದಲ್ಲಿ ನಿಂತು ವಿಷಾದ ವ್ಯಕ್ತ ಪಡಿಸಿದ ಕಂಗನಾ ರಣಾವತ್

Public TV
1 Min Read
kangana ranaut dhaakad 1

ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ತೆಲುಗಿನ ‘ಚಂದ್ರಮುಖಿ 2’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣದ ಸಿನಿಮಾಗಳ ಬಗ್ಗೆ ಹೆಮ್ಮೆಯಿಂದಲೇ ಮಾತನಾಡುತ್ತಿರುವ ಅವರು, ತೆಲುಗು ಸಿನಿ ನೆಲದಲ್ಲಿ ನಿಂತು ವಿಷಾದದ ಮಾತುಗಳನ್ನು ಆಡಿದ್ದಾರೆ. ಅಂಥದ್ದೊಂದು ಅವಕಾಶವನ್ನು ನಾನು ನಿರಾಕರಿಸಿದ್ದಕ್ಕಾಗಿ ಈಗಲೂ ಸಂಕಟವಾಗುತ್ತಿದೆ ಎಂದಿದ್ದಾರೆ.

chandramukhi 2 kangana ranaut

ಅಂದುಕೊಂಡಂತೆ ಆಗಿದ್ದರೆ ಮಹೇಶ್ ಬಾಬು ನಟನೆಯ ಪೋಕರಿ (Pokari) ಸಿನಿಮಾದಲ್ಲಿ ಕಂಗನಾ ರಣಾವತ್ ನಾಯಕಿಯಾಗಿ ನಟಿಸಬೇಕಿತ್ತು. ಮೊದಲು ಆಫರ್ ಹೋಗಿದ್ದೇ ಕಂಗನಾಗೆ. ಆದರೆ, ಈ ಅವಕಾಶವನ್ನು ಅವರು ನಿರಾಕರಿಸಿದರು. ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಅಂಥದ್ದೊಂದು ಸಿನಿಮಾ ಕೈ ಬಿಟ್ಟಿದ್ದಕ್ಕೆ ಈಗಲೂ ನನಗೆ ವಿಷಾದವಿದೆ ಎಂದು ಹೇಳಿಕೊಂಡಿದ್ದಾರೆ.

kangana ranaut

ಕಂಗನಾ ರಣಾವತ್ ‘ಸ್ವಾಗತಾಂಜಲಿ..’ (Swagatanjali) ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಚಂದ್ರಮುಖಿ 2 ಸಿನಿಮಾದ ಹಾಡು (Song) ಅದಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಅದರಲ್ಲೂ ಕಂಗನಾ ಕುಣಿದ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನೃತ್ಯ (Dance) ಕಂಡು ಬೆರಗಾಗಿದ್ದಾರೆ.

Kangana Ranaut 1

ಅತೀ ನಿರೀಕ್ಷೆ ಮೂಡಿಸಿರುವ ‘ಚಂದ್ರಮುಖಿ 2’ (Chandramukhi 2) ಸಿನಿಮಾದ ಒಂದೊಂದೇ ಮೊದಲ ನೋಟಗಳು (First Look) ಅನಾವರಣಗೊಳ್ಳುತ್ತಿವೆ. ಮೊನ್ನೆಯಷ್ಟೇ ರಾಘವ್ ಲಾರೆನ್ಸ್ ಫಸ್ಟ್ ಲುಕ್ ರಿಲೀಸ್ ಮಾಡಿತ್ತು ಚಿತ್ರತಂಡ. ನಂತರ ಕಂಗನಾ ರಣಾವತ್ ಅವರ ಮೊದಲ ನೋಟವನ್ನು ಬಿಡುಗಡೆ ಮಾಡಿ, ಕುತೂಹಲ ಮೂಡಿಸಿದ್ದಾರೆ ನಿರ್ದೇಶಕರು. ಈ ಸಿನಿಮಾದಲ್ಲಿ ಕಂಗನಾ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

 

ಕಂಗನಾ ರಣಾವತ್ (Kangana Ranaut) ಅವರು ಇತ್ತೀಚಿಗೆ ‘ಎಮರ್ಜೆನ್ಸಿ’ (Emergency) ಚಿತ್ರದ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದರು. ಈ ಬೆನ್ನಲ್ಲೇ ತಮ್ಮ ಫ್ಯಾನ್ಸ್‌ಗೆ ಕಂಗನಾ ಸಿಹಿಸುದ್ದಿ ನೀಡಿದ್ದಾರೆ. ಚಂದ್ರಮುಖಿಯಾಗಿ ನಟಿ ಅಭಿಮಾನಿಗಳ ಮುಂದೆ ಬರೋದ್ದಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಫಸ್ಟ್ ಲುಕ್ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.

Web Stories

Share This Article