ಬೆಂಗಳೂರು: ಬಾಲಿವುಡ್ ತಲೈವಿ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಕಂಗನಾ ರಣಾವತ್ Koo (ಕೂ) ನಲ್ಲಿ 1 ಮಿಲಿಯನ್ (10 ಲಕ್ಷ) ಫಾಲೋವರ್ಸ್ ದಾಟಿದ್ದಾರೆ. ಕೇವಲ ಆರು ತಿಂಗಳಲ್ಲಿ ಕಂಗನಾ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಒಂದು ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ ಮೊದಲ ಮಹಿಳಾ ಬಾಲಿವುಡ್ ನಟಿಯಾಗಿದ್ದಾರೆ.
Advertisement
ರಾಷ್ಟ್ರೀಯ, 2021ಸಪ್ಟೆಂಬರ್16 ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮತ್ತು’ಬಾಲಿವುಡ್ ಕ್ವೀನ್’ – ಕಂಗನಾ ರಣಾವತ್ – ಭಾರತದ ಮೈಕ್ರೋಬ್ಲಾಗಿಂಗ್ ವೇದಿಕೆಯಾದ Koo (ಕೂ) ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ಫೆಬ್ರವರಿ 2021 ರಲ್ಲಿ ಕೂನಲ್ಲಿ ತಮ್ಮ ಖಾತೆಯನ್ನು ತೆರೆದ ನಂತರ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇದನ್ನೂ ಓದಿ: 1 ಸಾಲಿನಲ್ಲಿ ಪ್ರಧಾನಿಗೆ ವಿಶ್ ಮಾಡಿದ ರಾಹುಲ್ ಗಾಂಧಿ
Advertisement
Advertisement
ಈ ಮೈಲಿಗಲ್ಲು ಸ್ಥಾಪಿಸಿದ ಕಂಗನಾ ಅವರನ್ನು ಅವರ ಅಭಿಮಾನಿಗಳು ಅಭಿನಂದಿಸಿದ್ದಾರೆ ಮತ್ತು ನಟಿಯ ಅದ್ಭುತ ಅಭಿನಯ, ಕಮರ್ಷಿಯಲ್ ಸಕ್ಸಸ್ ಬಗ್ಗೆ Koo (ಕೂ) ಮಾಡಿದ್ದಾರೆ. ಕಂಗನಾ ಅವರ ಅಧಿಕೃತ ಕೂ ಖಾತೆ – @kanganarofficial – ಅತಿಯಾಗಿ ಆಕರ್ಷಿಸಿತು ಮತ್ತು ಕಂಗನಾರ ಫಾಲೋವರ್ಸ್ ಕಳೆದ ಮೂರು ತಿಂಗಳಲ್ಲಿ ಬಹುತೇಕ ದ್ವಿಗುಣಗೊಂಡಿದ್ದಾರೆ, ವೇದಿಕೆಯಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಕಂಗನಾ ಪಾತ್ರರಾಗಿದ್ದಾರೆ.
Advertisement
ಕಂಗನಾ ತಮ್ಮ ಮುಂಬರುವ ತ್ರಿಭಾಷಾ ಚಿತ್ರದ ಬಗ್ಗೆ ಉತ್ಸಾಹದಿಂದ ಪೋಸ್ಟ್ ಮಾಡುತ್ತಿದ್ದಾರೆ,ತಲೈವಿ – ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಚರಿತ್ರೆ – ಈ ಚಿತ್ರದಲ್ಲಿ ಅವರು ಅರವಿಂದ ಸ್ವಾಮಿ ಎದುರು ನಟಿಸಿದ್ದಾರೆ. ಚಿತ್ರದ ಬಗೆಗಿನ ಸಂದರ್ಶನವೊಂದರಲ್ಲಿ ತಮಗೆ ಆ ಪಾತ್ರದ ಬಗ್ಗೆ ಹೆದರಿಕೆಯಿತ್ತೆಂದು ಹೇಳಿ, ತಮ್ಮ ಮತ್ತು ದಿವಂಗತ ನಾಯಕಿಯ ನಡುವೆ ಅನೇಕ ಸಮಾನಾಂತರ ಅಂಶಗಳನ್ನು ಎಳೆದಿದ್ದಾರೆ. ಇತ್ತೀಚಿನ Koo (ಕೂ) ಪೋಸ್ಟ್ ನಲ್ಲಿ, ಕಂಗನಾ ಅಧಿಕೃತ ಪೋಸ್ಟರ್ ನೊಂದಿಗೆ ತಲೈವಿಯ ಮೊದಲ ಹಾಡು, ತೇರಿ ಆಂಖೋ ಮೇ ಪ್ರಕಟಿಸಿದ್ದಾರೆ.
Koo (ಕೂ) ವಕ್ತಾರರು ” ನಮ್ಮ ವೇದಿಕೆಯಲ್ಲಿ ಕಂಗನಾ ಒಂದು ಮಿಲಿಯನ್ ಫಾಲೋವರ್ಸ್ ತಲುಪಿದ್ದಕ್ಕೆ ನಾವು ಹರ್ಷಗೊಂಡಿದ್ದೇವೆ. ವೇದಿಕೆಯ ಆರಂಭಿಕ ಬೆಂಬಲಿಗರಾಗಿ ಭಾಷಾ ಅಡೆತಡೆಗಳನ್ನು ನಿವಾರಿಸಿ ನಿಜವಾದ ಸಂಪರ್ಕಗಳನ್ನ ಏರ್ಪಡಿಸುವ ಸಂದೇಶವನ್ನು ಪಸರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಅಭಿವ್ಯಕ್ತಿಯ ಬೆಳಕಾಗಿದ್ದವರು ಮತ್ತು ಹಿಂಜರಿಕೆಯಿಲ್ಲದೆ ವೇದಿಕೆಯಲ್ಲಿ ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು. ನಾವು ಅವರ ಬೆಂಬಲವನ್ನು ಪ್ರಶಂಸಿಸುತ್ತೇವೆ ಮತ್ತು ಇನ್ನೂ ಹಲವು ಮೈಲಿಗಲ್ಲುಗಳನ್ನ ಸ್ಥಾಪಿಸಲಿ ಎಂದು ಬಯಸುತ್ತೇವೆ. ನಮ್ಮ ಬಹುಭಾಷಾ ವೈಶಿಷ್ಟ್ಯಗಳು ದೇಶಾದ್ಯಂತ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತವೆ ಎಂದು ನಾವು ನಂಬುತ್ತೇವೆ” ಎಂದು ಹೇಳಿದರು.
ಕಂಗನಾ ರಣಾವತ್ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಬಾಲಿವುಡ್ ಕ್ವೀನ್’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಾರೆ ಮತ್ತು ಮಣಿಕರ್ಣಿಕಾ – ದಿ ಕ್ವೀನ್ ಆಫ್ ಝಾನ್ಸಿ ನಿರ್ದೇಶಿಸಿದ್ದಾರೆ ಜೊತೆಗೆ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ.
Koo (ಕೂ) ಬಗ್ಗೆ:
Koo (ಕೂ) ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಕೇವಲ 10% ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ Koo (ಕೂ) ಒಂದು ವೇದಿಕೆಯನ್ನು ಒದಗಿಸುತ್ತದೆ.